
ಬೆಂಗಳೂರು, ಜು.24- ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಶಾಸಕ ಕಂಪ್ಲಿ ಗಣೇಶ್ ತಮ್ಮನ್ನು ಅತೃಪ್ತರ ಗುಂಪಿಗೆ ಸೇರಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಿರ್ಧಾರ ಅಚಲ, ಸ್ಪಷ್ಟವಾಗಿದ್ದು, ಕಾಂಗ್ರೆಸ್ನಲ್ಲೇ ಇದ್ದು ಮುಂದೆಯೂ ಅದೇ ಪಕ್ಷದಲ್ಲಿ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ನಾವು ನಿಷ್ಠಾವಂತ ಕಾಂಗ್ರೆಸ್ ಶಾಸಕರಾಗಿದ್ದು, ಯಾವುದೇ ಕಾರಣಕ್ಕೂ ಎಲ್ಲೂ ಹೋಗುವುದಿಲ್ಲ ಎಂದರು.
ಈಗ ಬಿಜೆಪಿಗೆ ಅಧಿಕಾರ ಸಿಗಬಹುದು.ಆದರೆ, ಅದು ಶಾಶ್ವತವಲ್ಲ. ಮುಂದೆ ಯಾವ ರೀತಿ ಅಧಿಕಾರ ನಡೆಸುತ್ತಾರೆ ಎಂಬುದನ್ನು ಕಾದು ನೋಡೋಣ.ನಮಗೂ ಅಧಿಕಾರದ ಆಸೆ ಇದೆ.ಮುಂದಿನ ಚುನಾವಣೆಯಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.