ಮೇಯರ್ ವಿರುದ್ಧ ಜಾಲತಾಣಗಳಲ್ಲಿ ಸುಳ್ಳುಸುದ್ಧಿ-ಬಂಧಿಸದಿದ್ದರೆ ಮುಷ್ಕರ ನಡೆಸಲಾಗುವುದು-ಬಿಬಿಎಂಪಿ ಸಂಘ

ಬೆಂಗಳೂರು, ಜು.23- ಮೇಯರ್ ಗಂಗಾಂಬಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವವರನ್ನು ಎರಡು ದಿನಗಳಲ್ಲಿ ಬಂಧಿಸದಿದ್ದರೆ ಮುಷ್ಕರ ನಡೆಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ ನೀಡಿದೆ.

ರಸ್ತೆಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ ಎಂಬ ಬಿಬಿಎಂಪಿ ಹೇಳಿಕೆ ಖಂಡಿಸಿ ಮೋದಿ ಭಕ್ತ ಎಂಬ ಫೇಸ್‍ಬುಕ್‍ನಲ್ಲಿ ಮೇಯರ್ ವಿರುದ್ಧ ಅಸತ್ಯ ಮತ್ತು ಅಸಭ್ಯ ಭಾಷೆಯಲ್ಲಿ ಸಂದೇಶ ಹರಿಬಿಡಲಾಗಿರುವುದನ್ನು ಖಂಡಿಸಿ ನಾವು ಪೆÇಲೀಸ್ ಆಯುಕ್ತ ಅಲೋಕ್‍ಕುಮಾರ್ ಅವರಿಗೆ ದೂರು ನೀಡಿದ್ದೇವೆ ಎಂದು ಸಂಘದ ಅಧ್ಯಕ್ಷ ಅಮೃತ್‍ರಾಜ್ ತಿಳಿಸಿದ್ದಾರೆ.

ಆಯುಕ್ತರಿಗೆ ದೂರು ನೀಡಿ ಫೇಸ್‍ಬುಕ್ ಪೇಜ್‍ಗಳಲ್ಲಿ ಅಸಭ್ಯ ಹೇಳಿಕೆಯನ್ನು ಪೆÇೀಸ್ಟ್ ಮಾಡಿರುವ ಮಣಿಕಂಠ ಭಾರದ್ವಾಜ್ ಎಂಬ ವ್ಯಕ್ತಿಯನ್ನು ಹಾಗೂ ಮೇಯರ್ ವಿರುದ್ಧ ಅವಹೇಳನಕಾರಿ ಸುದಿಗಳನ್ನು ಹಬ್ಬಿಸುತ್ತಿರುವವರನ್ನು ಬಂಧಿಸುವಂತೆ ಒತ್ತಾಯಿಸಿ ಇಂದಿನಿಂದಲೇ ಮುಷ್ಕರ ನಡೆಸಲು ಪಾಲಿಕೆ ನೌಕರರು ತೀರ್ಮಾನಿಸಿದ್ದರು.

ಆದರೆ, ಮೇಯರ್ ಗಂಗಾಂಬಿಕೆ ಅವರು ತಮ್ಮೊಂದಿಗೆ ಸಭೆ ನಡೆಸಿ ದಿಢೀರ್ ಮುಷ್ಕರ ನಡೆಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.ಅವರ ಮನವಿಗೆ ಸ್ಪಂದಿಸಿ ನಾವು ಪೆÇಲೀಸರಿಗೆ ಆರೋಪಿಗಳನ್ನು ಬಂಧಿಸುವಂತೆ ಎರಡು ದಿನಗಳ ಗಡುವು ನೀಡಿದ್ದೇವೆ.
ಈ ಗಡುವಿನೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ನಮ್ಮ ಸಂಘದಿಂದ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಅಮೃತ್‍ರಾಜ್ ಎಚ್ಚರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ