ಹೊಸದಿಲ್ಲಿ: ಅತೃಪ್ತ ಶಾಸಕರ ರಾಜೀನಾಮೆ ಕುರಿತು ಇಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದ್ದು, ನಿರ್ಧಿಷ್ಟ ಸಮಯದಲ್ಲಿ ರಾಜೀನಾಮೆ ಬಗ್ಗೆ ನಿರ್ಧಾರ ಮಾಡಬೇಕು ಎಂದು ಸ್ಪೀಕರ್ ಗೆ ಆದೇಶಿಸಿದೆ. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ ಶಾಸಕರಿಗೆ ಬಹುದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಏತನ್ಮಧ್ಯೆ, ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವಿಶ್ವಾಸಮತಯಾಚನೆ ಮಾಡಲಿದ್ದು, ಈ ವೇಳೆ ಹಾಜರಿರಬೇಕೆಂದು ಅತೃಪ್ತ ಶಾಸಕರ ಮೇಲೆ ಒತ್ತಡ ಹಾಕುವಂತಿಲ್ಲ. ಸದನಕ್ಕೆ ಹಾಜರಾಗುವುದು ಬಿಡುವುದು ಅತೃಪ್ತ ಶಾಸಕರಿಗೆ ಬಿಟ್ಟದ್ದು ಎಂದು ಸುಪ್ರೀಂ ತಿಳಿಸಿದೆ.
ಸುಪ್ರೀಂ ಆದೇಶಕ್ಕೆ ಸ್ವಾಗತ: ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತೇನೆ. ನಿಯಮಾವಳಿಗಳ ಪ್ರಕಾರ ಪಕ್ಷಪಾತ ಮಾಡದೆ ಕ್ರಮ ತೆಗೆದುಕೊಳ್ಳುತ್ತೇನೆ. ಸಂವಿಧಾನದ ಆಶಯವನ್ನು ಪಾಲಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.