ರಾಜ್ಯಪಾಲರ ಆದೇಶಕ್ಕೆ ಕಿಮ್ಮತ್ತು ನೀಡದ ಸಮ್ಮಿಶ್ರ ಸರ್ಕಾರ: ರಾತ್ರೋ ರಾತ್ರಿ ಕಡತ ವಿಲೇವಾರಿ

ಬೆಂಗಳೂರು: ರಾಜ್ಯಪಾಲರ ಆದೇಶಕ್ಕೂ ಡೋಂಟ್ ಕೇರ್ ಎನ್ನದ ಮೈತ್ರಿ ಸರ್ಕಾರದ ಸಿಎಂ ಮತ್ತು ಸಚಿವರು ರಾತ್ರೋ ರಾತ್ರಿ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ.

ಶಾಸಕರ ರಾಜೀನಾಮೆ ಪರ್ವದ ಹಿನ್ನೆಲೆ ಪತನದ ಹಾದಿಯಲ್ಲಿರುವ ಮೈತ್ರಿ ಸರ್ಕಾರ ಯಾವುದೇ ಮಹತ್ತರ ನಿರ್ಧಾರವನ್ನು ಕೈಗೊಳ್ಳಬೇಡಿ ಎಂದು ರಾಜ್ಯಪಾಲರು ಆದೇಶ ನೀಡಿದ್ದರು. ಈ ಆದೇಶವನ್ನು ಲೆಕ್ಕಿಸದ ಸರ್ಕಾರದ ರಾತ್ರಿ 10 ಗಂಟೆಯ ಸಮಯದಲ್ಲೂ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ.

ತಡ ರಾತ್ರಿ ಶಕ್ತಿ ಭವನದ ಮುಂದೆ ಆಧಿಕಾರಿಗಳು ಫೈಲ್ ಹಿಡಿದುಕೊಂಡು ಓಡಾಡುತ್ತಿರುವುದು ಕಂಡು ಬಂದಿದೆ. ಬಹುಮತ ಸಾಬೀತು ಪಡಿಸುವ ಒತ್ತಡ ನಡುವೆಯೂ ಮೈತ್ರಿ ಸರ್ಕಾರ ಕಡತ ವಿಲೇವಾರಿಯಲ್ಲಿ ಬ್ಯುಸಿಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಡ್ತಿ, ನೇಮಕಾತಿ, ವರ್ಗಾವಣೆ ಮತ್ತು ಅನುದಾನ ಬಿಡುಗಡೆಯಲ್ಲಿ ತೊಡಗಿರುವ ಸರ್ಕಾರ, ಹಳೆಯ ದಿನಾಂಕವನ್ನು ಹಾಕಿ ಕಡತ ವಿಲೇವಾರಿ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕ ಬಸವರಾಜು ಬೊಮ್ಮಯಿ ಆರೋಪ ಮಾಡಿದ್ದರು. ಅವರು ಆರೋಪಕ್ಕೆ ಈಗ ನಡೆಯುತ್ತಿರುವ ದೃಶ್ಯಗಳು ಪುಷ್ಠಿ ನೀಡಿದ್ದಂತೆ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ