ನಿನ್ನೆ ಚಂದ್ರಗ್ರಹಣ ವೀಕ್ಷಿಸಿದ ಲಕ್ಷಾಂತರ ಮಂದಿ

ಬೆಂಗಳೂರು, ಜು.17- ಉದ್ಯಾನನಗರಿ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ನಿನ್ನೆ ಚಂದ್ರಗ್ರಹಣ ಸಂಭವಿಸಿದ್ದು, ಲಕ್ಷಾಂತರ ಮಂದಿ ಸೌರಮಂಡಲದ ಈ ವಿಸ್ಮಯ ವೀಕ್ಷಿಸಿದರು.

ಚಂದ್ರಗ್ರಹಣದ ನಂತರ ಇಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳು ನಡೆದವು. ಕೋಟ್ಯಂತರ ಮಂದಿ ವಿಶೇಷ ಪೂಜೆ ನೆರವೇರಿಸುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಕಳೆದ 149 ವರ್ಷಗಳ ಬಳಿಕ ಶತಮಾನದ ಅತೀ ದೀರ್ಘಾವಧಿಯ ಚಂದ್ರಗ್ರಹಣ ಆಗಸದಲ್ಲಿ ಗೋಚರಿಸಿದೆ.

ಭಾರತದಲ್ಲಿ ರಾತ್ರಿ 1.31ರಿಂದ ಬೆಳಗ್ಗಿನ ಜಾವ 4.31ರವರೆಗೆ ಚಂದ್ರಗ್ರಹಣ ಕಾಣಿಸಿಕೊಂಡಿತು.

ಈ ವರ್ಷ ಈಗಾಗಲೇ ಮೂರು ಗ್ರಹಣ ಆಗಿದೆ.ಎರಡು ಸೂರ್ಯಗ್ರಹಣ ಮತ್ತೊಂದು ಚಂದ್ರಗ್ರಹಣ.ಕೇವಲ ಎರಡು ವಾರದ ಹಿಂದೆ ಸೂರ್ಯಗ್ರಹಣ ಸಂಭವಿಸಿತ್ತು.

ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ರೇಖೆಯಲ್ಲಿ ಬರುತ್ತಾರೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುತ್ತದೆ . ಹೀಗಾಗಿ ಚಂದ್ರನ ಮೇಲೆ ಸೂರ್ಯನ ಕಿರಣ ಬೀಳುವುದೇ ಇಲ್ಲ.

ಭಾರತ ಸೇರಿ ಏಷ್ಯಾಖಂಡ, ಆಸ್ಟ್ರೇಲಿಯಾ, ಆಫ್ರಿಕಾ ಖಂಡ, ಯುರೋಪ್, ದಕ್ಷಿಣ ಅಮೆರಿಕಾದಲ್ಲಿ ಗೋಚರಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ