ಜುಲೈನಲ್ಲಿ ಚಂದ್ರಯಾನ-2 ಉಡಾವಣೆಗೆ ಸಜ್ಜಾದ ಇಸ್ರೋ; ಉಪಗ್ರಹದ ಮಾದರಿಯನ್ನು ಪ್ರದರ್ಶಿಸಿದ ವಿಜ್ಞಾನಿಗಳು

ಬೆಂಗಳೂರು ಮೊದಲ ಚಂದ್ರಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದ  ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಈಗ ಚಂದ್ರಯಾನ 2 ಉಡಾವಣೆಗೆ ಸಜ್ಜಾಗಿದೆ.

ಚಂದ್ರನ ಅಂಗಳಕ್ಕೆ ಎರಡನೇ ಬಾರಿ ಉಪಗ್ರಹ​ ಉಡಾವಣೆಗೆ ಸಜ್ಜಾಗಿರುವ ಇಸ್ರೋ ಇದೇ ಜುಲೈ 9 ರಿಂದ 16ರ ಒಳಗೆ ಚಂದ್ರಯಾನ 2 ಉಡಾವಣೆ ಮಾಡಲು ಸಿದ್ದವಾಗಿದೆ. ಸೆಪ್ಟೆಂಬರ್​ 6ರಂದು ಯಶಸ್ವಿಯಾಗಿ ತನ್ನ ಕಕ್ಷೆಗೆ ಸೇರಬಹುದು ಎಂಬ ನಿರೀಕ್ಷೆ ಇದೆ.

ಚಂದ್ರಯಾನ 2 ರಾಕೆಟ್​ ಉಡಾವಣೆಗೂ ಮೊದಲು ಉಪಗ್ರಹದ ಮಾದರಿಯ  ಬೆಂಗಳೂರಿನಲ್ಲಿ ಇಸ್ರೋದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿತು. ಆರ್ಬಿಟರಿ, ಲ್ಯಾಂಡೆರ್​ (ವಿಕ್ತಮ್​) ಮತ್ತು ರೋವರ್​ (ಪ್ರಗ್ಯಾನ್​) ಎಂಬ ಮೂರು ಮಾದರಿಯನ್ನು ಈ ಉಪಗ್ರಹ ಹೊಂದಿದೆ. ರೋವರ್​ ಲ್ಯಾಂಡರ್​ ಒಳಗಿನ ಮನೆಯಾಗಿದೆ ಎಂದು ಇಸ್ರೋ ತಿಳಿಸಿದೆ. ಆರ್ಬಿಟರಿಯಲ್ಲಿ 8 ಉಪಕರಣಗಳಿವೆ. ಇನ್ನು ಈ ಆರ್ಬಿಟರಿಯಲ್ಲಿ ವಿದೇಶಿ ಪ್ಲೆಲೋಡ್​ ಎಂದರೆ ಅದು ನಾಸಾದ ಇನ್​ಫ್ರಾ ರೆಡ್​ ಸ್ಪೆಕ್ಟಂ. ವಿಕ್ರಮ್​ನಲ್ಲಿ ಮೂರು ಉಪಕರಣ ಇರಲಿದೆ.

“ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್​ ಇಳಿಸಲಾಗುತ್ತದೆ. ಯಾವುದೇ ದೇಶ ಈವರೆಗೂ ಚಂದ್ರದ ದಕ್ಷಿಣ ಧ್ರುವದತ್ತ ಗಮನ ಹರಿಸಿಲ್ಲ. ಅಲ್ಲಿ ನಾವು ಲ್ಯಾಂಡರ್ ಮತ್ತು ರೋವರ್​ ಇಳಿಸಿ ಇತಿಹಾಸ ಸೃಷ್ಟಿಸುವುದು ಖಚಿತ. ಈ ಭಾಗದಲ್ಲಿ ನೀರು ಇರುವ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ,” ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್​ ಈ ಹಿಂದೆ ಮಾಹಿತಿ ನೀಡಿದ್ದರು.

ಚಂದ್ರಯಾನ-2 ಯೋಜನೆಗಾಗಿ ಇಸ್ರೋ ಜಿಎಸ್​ಎಲ್​ವಿ ಎಂಕೆ 3 ಎಂಬ ಹೊಸ ಮಾದರಿಯ ರಾಕೆಟ್ ಒಂದನ್ನು ನಿರ್ಮಿಸಿದೆ. ಇದರ ಮೂಲಕ ಉಪಗ್ರಹವನ್ನು ಭೂ ಕಕ್ಷೆಯಿಂದ ಚಂದ್ರನ ಮೇಲ್ಮೈಗೆ ಉಡಾಯಿಸಲಾಗುವುದು.

ಸದ್ಯ ಈ ಉಪಗ್ರಹದ ಅಂತಿಮ ಹಂತದ ಪರೀಕ್ಷೆಯನ್ನು ಇಸ್ರೋ ವಿಜ್ಞಾನಿಗಳು ನಡೆಸಿದ್ದಾರೆ. ಜುಲೈನಲ್ಲಿ ಶ್ರೀಹರಿಕೋಟದಿಂದ ಇದನ್ನು ಉಡಾವಣೆ ಮಾಡಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ