ಇಸ್ರೋದ ಮುಕುಟಕ್ಕೆ ಮತ್ತೊಂದು ಗರಿ; ಏಕಕಾಲದಲ್ಲಿ 28 ಉಪಗ್ರಹ ಉಡಾವಣೆ

ನವದೆಹಲಿ: ಎಮಿಸ್ಯಾಟ್ ಉಪಗ್ರಹ ಸೇರಿದಂತೆ 28 ನ್ಯಾನೋ ಉಪಗ್ರಹಗಳನ್ನು ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ.

ಪಿಎಲ್‍ಎಲ್‍ವಿ-ಸಿ45 ಇಂದು ಬೆಳಗ್ಗೆ 9:30ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಈ ರಾಕೆಟನ್ನು ಉಡಾವಣೆ ಮಾಡಲಾಯಿತು ಎಂದು ಇಸ್ರೋ ತಿಳಿಸಿದೆ.


436 ಕೆಜಿ ತೂಕವುಳ್ಳ ಕಡಿಮೆ ಗುರುತ್ವಾಕರ್ಷಣೆಯ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಎಮಿಸ್ಯಾಟ್ ಉಪಗ್ರಹಕ್ಕೆ ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿದೆ. ಈ ಮೊದಲು ಏರ್ ಪ್ಲೇನ್‍ಗಳ ಮೂಲಕ ಶತ್ರು ರಾಷ್ಟ್ರಗಳಲ್ಲಿನ ರೇಡಾರ್ ಪತ್ತೆ ಮಾಡಿ ಎಚ್ಚರಿಸುವ ಕೆಲಸವನ್ನ ಮಾಡಲಿದೆ.

ಇಸ್ರೋದ ಪಿಎಸ್‍ಎಲ್‍ವಿ-ಸಿ-45 ರಾಕೆಟ್ ಮೂಲಕ ಡಿಆರ್ ಡಿಒ ಅಭಿವೃದ್ಧಿಪಡಿಸಿದ ಎಮಿಸ್ಯಾಟ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸ್ಯಾಟಲೈಟ್ ಸೇರಿದಂತೆ ಅಮೆರಿಕದ 24, ಸ್ವಿಟ್ಜಿರ್  ಲೆಂಡ್ ನ 01, ಸ್ಪೇನ್ 1, ಲಿಥುಯೇನಿಯಾದ 02 ಹೊತ್ತೊಯ್ದಿದ್ದು, 3 ಕಕ್ಷೆಗಳಲ್ಲಿ ಕಕ್ಷೆಗೆ ಸೇರಿಸಲಿದೆ.

ಎಮಿಸ್ಯಾಟ್ ಉಪಗ್ರಹವನ್ನು ಡಿಆರ್ ಡಿಒ ಅಭಿವೃದ್ಧಿ ಪಡಿಸಿದೆ. ಮೊದಲ ಬಾರಿಗೆ ಮೂರು ವಿವಿಧ ಕಕ್ಷೆಗಳಲ್ಲಿ ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

ಡಿಆರ್‍ಡಿಒ ರೂಪಿಸಿರುವ 436 ಕೆ.ಜಿ. ತೂಕದ ‘ಎಮಿಸ್ಯಾಟ್’ electromagnetic spectrum measurement) ಉಪಗ್ರಹಕ್ಕೆ ವಿದ್ಯುತ್ಕಾಂತೀಯ ಅಲೆಗಳ ಕ್ಷೇತ್ರ ವಿಶ್ಲೇಷಣೆಯ ಸಾಮರ್ಥ್ಯವಿದೆ. ಇದನ್ನು ರಕ್ಷಣಾ ಉದ್ದೇಶಗಳಿಗೆ ಬಳಸಲಾಗುತ್ತದೆ. ಮೊದಲ ಬಾರಿಗೆ ಸಾಮಾನ್ಯ ಜನರಿಗೆ ರಾಕೆಟ್ ಉಡಾವಣೆಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ