ಇಸ್ರೊ ಮುಡಿಗೆ ಮತ್ತೊಂದು ಯಶಸ್ಸಿನ ಗರಿ; ಭೂ ಪರಿವೀಕ್ಷಣೆ ಉಪಗ್ರಹ ರಿಸ್ಯಾಟ್​ -2ಬಿ ಉಡಾವಣೆ ಯಶಸ್ವಿ

ಶ್ರೀಹರಿಕೋಟಾಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೊ) ಹೊಸ ಮುಕುಟ ಸೇರ್ಪಡೆಯಾಗಿದೆ. ಬುಧವಾರ ಮುಂಜಾನೆ ಭೂ ಪರಿವೀಕ್ಷಣೆ ಉಪಗ್ರಹ ರಿಸ್ಯಾಟ್​-2ಬಿಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಬುಧವಾರ ಬೆಳಗ್ಗೆ 5.30ಕ್ಕೆ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಹಾರಿಸಲಾಗಿದೆ. 615 ಕೆಜಿ ತೂಕ ಇರುವ ಈ ಉಪಗ್ರಹ ರಕ್ಷಣೆಗೆ ಸಂಬಂಧಿಸಿದ್ದಾಗಿದೆ.

ಭಾರತೀಯ ಗಡಿ ಮೇಲೆ ಸೆಟಲೈಟ್​ ಕಣ್ಗಾವಲು ಇಡಲಿದೆ. ಇದರಿಂದ ದೇಶದ ಭದ್ರತೆಗೆ ಪುಷ್ಟಿ ಸಿಕ್ಕಂತಾಗಿದೆ.

ಈ ಮೊದಲು ರಿಸ್ಯಾಟ್​-1 ಹಾಗೂ ರಿಸ್ಯಾಟ್​-2 ಉಪಗ್ರಹಗಳನ್ನು ಇಸ್ರೋ ಹಾರಿಬಿಟ್ಟಿತ್ತು. ಇವುಗಳಿಗಿಂತ ಈ ಉಪಗ್ರಹ ಹೆಚ್ಚು ಶಕ್ತಿಶಾಲಿಯಾಗಿದೆ. ರಿಸ್ಯಾಟ್​-2ಬಿ  ಹೆಚ್ಚು ನಿಖರವಾಗಿ ಫೋಟೋ ತೆಗೆಯುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.

“ಪ್ರಮುಖ ಸೆಟಲೈಟ್​ಗಳಲ್ಲಿ ಇದು ಕೂಡ ಒಂದು. ಭಾರತದ ಪಾಲಿಗೆ ಈ ಯೋಜನೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಕರಾರುವಕ್ಕಾಗಿ ಭೂ ವೀಕ್ಷಣೆ ಮಾಡುವ ಸಾಮರ್ಥ್ಯ ಇದಕ್ಕಿದೆ,” ಎಂದು ಈ ಮೊದಲು ಇಸ್ರೊದ ಮುಖ್ಯಸ್ಥ ಕೆ ಶಿವನ್​ ಈ ಮೊದಲು ಹೇಳಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ