ಲಖನೌ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಗಲಭೆ ಪ್ರಕರಣ ನಡೆದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸಮಾಜವಾದಿ ಪಕ್ಷ ದ ಸರ್ಕಾರ ಇದ್ದಾಗ ಹಿಂದೂಗಳನ್ನು ಬಲವಂತವಾಗಿ ಬೇರೆ ಕಡೆಗೆ ವಲಸೆ ಹೋಗುವಂತೆ ಮಾಡಲಾಗುತಿತ್ತು ಎಂದು ಆರೋಪಿಸಿದ್ದಾರೆ.
ಎರಡು ವರ್ಷಗಳ ತಮ್ಮ ಸರ್ಕಾರದ ಸಾಧನೆಗಳ ವರದಿಯನ್ನು ಮಂಡಿಸಿದ ಯೋಗಿ ಆದಿತ್ಯನಾಥ್, 2012ರಲ್ಲಿ 227, 2013ರಲ್ಲಿ 247, 2014 ರಲ್ಲಿ 242, 2015ರಲ್ಲಿ 219 ಹಾಗೂ 2016ರಲ್ಲಿ 100 ಹಿಂಸಾಚಾರಗಳು ನಡೆದಿದ್ದವು. ಆದರೆ, ಕಳೆದ 24 ತಿಂಗಳ ಕಾಲದ ಬಿಜೆಪಿ ಆಡಳಿತಾವಧಿಯಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ ಎಂದು ತಿಳಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದ್ದ ಸಮಾಜ ವಿರೋಧಿಗಳಿಗೆ ಪ್ರೋತ್ಸಾಹ ನೀಡಲಾಗುತಿತ್ತು. ಇದರಿಂದಾಗಿ ಕೈರಾನಾ, ಕಾಂದಾಲಾ ಸೇರಿದಂತೆ ಮತ್ತಿತರ ಪಟ್ಟಣಗಳಲ್ಲಿನ ವ್ಯಾಪಾರಿಗಳು ಹಾಗೂ ಅಧಿಕ ಪ್ರಮಾಣದ ಹಿಂದೂಗಳು ಬೇರೆಡೆಗೆ ವಲಸೆ ಹೋಗುವಂತಾಯಿತು ಎಂದು ಆರೋಪಿಸಿದರು.
uttara pradesh,cm yogi adityanath