ಗೋವುಗಳ ರಕ್ಷಣೆಗೆ 247.60 ಕೋಟಿ ರೂ ಮೀಸಲಿಟ್ಟ ಯೋಗಿ ಸರಕಾರ

ನವದೆಹಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸರ್ಕಾರ ಗೋವುಗಳ ರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯ ಬಜೆಟ್​ನಲ್ಲಿ ಗೋಶಾಲೆಗಳ ರಕ್ಷಣೆ, ನಿರ್ಮಾಣ, ನಿರ್ಗತಿಕ ಹಸುಗಳ ಸಂರಕ್ಷಣೆಗಾಗಿ 247.60 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.

ಉತ್ತರ ಪ್ರದೇಶ ಹಣಕಾಸು ಸಚಿವ ರಾಜೇಶ್​ ಅಗರ್​ವಾಲಾ ಇಂದು ಬಜೆಟ್​ ಮಂಡನೆ ಮಾಡಿದ್ದು, ಅದರಲ್ಲಿ 247.60 ಕೋಟಿ ರೂಪಾಯಿಯನ್ನು ಗೋಶಾಲೆಗಳ ದುರಸ್ತಿ, ನಿರ್ವಹಣೆ ಮತ್ತು ಹೊಸ ಗೋಶಾಲೆಗಳ ನಿರ್ಮಾಣಕ್ಕೆ ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ.

ನಗರ ಪ್ರದೇಶದಲ್ಲಿ ಇರುವ ಕನ್ಹಾ ಗೋಶಾಲೆ ಮತ್ತು ಬೇಸಹರಾ ಪಶು ಆಶ್ರಮಕ್ಕೆ 200 ರೂಪಾಯಿ ಹಂಚಿಕೆ ಮಾಡಲಾಗಿದ್ದು, ಅಂದಾಜು 165 ಕೋಟಿ ರೂಪಾಯಿಯನ್ನು ರಾಜ್ಯದಲ್ಲಿ ಇರುವ ನಿರ್ಗತಿಕ ಹಸುಗಳ ನಿರ್ವಹಣೆಗೆ ಮೀಸಲಿಡಲಾಗಿದೆ.

ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ 750 ಹಸುಗಳ ಶೆಲ್ಟರ್​ ನಿರ್ಮಾಣ ಮಾಡಲು ಕ್ರಮಕೈಗೊಳ್ಳುವಂತೆ ಈ ಮೊದಲು ಯೋಗಿ ಆದಿತ್ಯನಾಥ್​ ಅವರು ತಮ್ಮ ಅಧಿಕಾರಿಗಳಿಗೆ ತಿಳಿಸಿದ್ದರು. ದಾರಿ ತಪ್ಪಿ ಬರುವ, ಮಾಲೀಕರಿಲ್ಲದ ಹಸುಗಳಿಗೆ ಶೆಲ್ಟರ್​ ನಿರ್ಮಿಸಲು ಪ್ರತಿ ಪುರಸಭೆ ನಿಗಮಗಳಿಗೆ 10 ಕೋಟಿ ರೂಪಾಯಿ ನೀಡಲಾಗುವುದು. ಹಾಗೇ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ನಿರ್ಮಿಸಲು ಅಲ್ಲಿನ ಆಡಳಿತಕ್ಕೆ 1.2 ಕೋಟಿ ರೂ.ನಿಗದಿಮಾಡಿದ್ದಾಗಿ ತಿಳಿಸಿದ್ದರು.

Uttar Pradesh,CM Yogi Adityanath,budget

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ