ಎನ್‍ಡಿಎ ಸರ್ಕಾರ ದೇಶದ ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಿದೆ.

ಎಲ್ಲರೊಳಗೊಂದಾಗು ಮಂಕುತಿಮ್ಮ

ಕಲಬುರಗಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶ
ಕಲಬುರಗಿ,ಮಾ.06-ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂದೆ ಕಾಂಗ್ರೇಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‍ನ ಕುಮಾಸ್ವಾಮಿ ನೇತೃತ್ವದ ಸರ್ಕಾರ ಕಾಂಗ್ರೇಸ್‍ನ ಕೈಗೊಂಬೆಯಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪ್ರಧಾನಿ ಟೀಕಾಪ್ರಹಾರ ನಡೆಸಿದರು.
ಕಲಬುರಗಿ ಜಿಲ್ಲೆಯ ಜನತೆಗೆ ಮತ್ತು ಸಹೋದರ ಸಹೋದರಿಯರಿಗೆ ನನ್ನ ವಂದನೆಗಳು ಎಂದು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಪ್ರಧಾನಿ, ಗಾಣಗಾಪುರ ದತ್ತಾತ್ರೇಯ, ಕೊರಂಟಿ ಹನುಮಾನ್ ಮತ್ತು ಶರಣಬಸವೇಶ್ವರರಿಗೆ ಪ್ರಧಾನಿ ವಂದಿಸಿದರು.
ಇಂದು ಬಿಜೆಪಿಗೆ ಸೇರ್ಪಡೆಯಾದ ಡಾ.ಉಮೇಶ್ ಜಾಧವ್‍ರವರನ್ನು ಸ್ವಾಗತಿಸಿದ ಪ್ರಧಾನಿ ಇವರ ಸೇರ್ಪಡೆಯಿಂದ ಬಿಜೆಪಿಗೆ ಒಳ್ಳೆಯ ಕಾರ್ಯಕತ್ರು ಸಿಕ್ಕಿದದಾರೆ ಎಂದು ಹೇಳಿದರು.
ನಾನು ಕಳೆದ ಬಾರಿ ಹೇಳಿದಂತೆ ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದೇನೆ. ನಮ್ಮ ಸರ್ಕಾರ ಹಿಂದಿನ ಸರ್ಕಾರ ಅಪೂರ್ಣಗೊಳಿಸಿದ್ದ ಹಲವಾರು ಕೆಲಸಗಳನ್ನು ಪೂರ್ತಿಗೊಳಿಸಿದೆ ಎಂದು ಹೇಳಿದರು. ರಾಜ್ಯದ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿ ಇಎಸ್‍ಐಸಿ ಆಸ್ಪತ್ರೆ ಮತ್ತು ಮೆಇಕಲ್ ಕಾಲೇಜು ಪ್ರಾರಂಭಿಸಿದ್ದೇವೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸೂಪರ್ ಸ್ಪಷಾಲಿಟಿ ಬ್ಲಾಕ್ ಪ್ರಾರಂಭಿಸಿದ್ದೇವೆ ಎಂದು ಹೇಳಿದರು. ಈಶಾನ್ಯ ಪ್ರಾದೇಶಿಕ ವಿದ್ಯಾರ್ಥಿಗಳಿಗೆ ಮಹಿಳಾ ಹಾಸ್ಟೆಲ್‍ನ್ನು ಪ್ರಧಾನಿ ದೇಸಕ್ಕೆ ಸಮರ್ಪಿಸಿದರು ಮತ್ತು ಕಲಬುರುಗಿಯಲ್ಲಿ ಭಾರತ್ ಪೆಟ್ರೋಲಿಯಂ ಡಿಪೋಗೆ ಅಡಿಗಲ್ಲು ಹಾಕಿದರು.
ಎನ್‍ಡಿಎ ಸರ್ಕಾರ ದೇಶದ ನಾಗರಿಕರ ಸಮಸ್ಯೆಗಳನ್ನು ಪರಹಿರಿಸುವ ಕೇಲಸ ಮಾಡಿದೆ.

ಹಿಂದಿನ ಯುಪಿಎ ಸರ್ಕಾರಕ್ಕೆ ದೇಶದ ಅಭಿವೃದ್ಧಿ ಬಗೆಯಾಗಲಿ ದೇಶದ ಜನತೆಯ ಬಗ್ಗೆಯಾಗಲಿ ಸ್ವಲ್ಪವೂ ಕಾಳಜಿಯಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಆಯುಷ್ಮಾನ್ ಯೋಜನೆಯ ಫಲಾನಭವಿಗಳೊಂದಿಗೆ ಸಂವಾದ ನಡೆಸುವೆ ಆವಕಾಶ ಸಿಕ್ಕಿದ್ದು ನನ್ನು ಪುಣ್ಯ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ರೈತರ ಖಾತೆಗೆ ನೇರವಾಗಿ ಹಣ ಜಮಾ ಹಾಗುವದರಿಂದ ರಾಜ್ಯ ಸರ್ಕಾರಕ್ಕೆ ಏನು ಸಿಗುತ್ತಿಲ್ಲ, ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಮತ್ತು ಅವರ ಮೇಲೆಯೇ ಕೇಸುಗಳನ್ನು ಹಾಕಿ ರೈತರಿಗೆ ಮೋಸ ಮಾಡುತ್ತಿದೆ ಎಂದು ಸಿ.ಎಂ.ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸಿದರು.ಕೇಂದ್ರ ಸರ್ಕಾರವು ರೈತರಿಗೋಸ್ಕರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪರಿಚಯಿಸಿದೆ. ಈ ಯೋಜನೆಯು ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡಿದೆ ಮತ್ತು ಬೀಜಗಳ ಖರೀದಿ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಪ್ರಧಾನಿ ಹೇಳಿದರು. ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಿಂದ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪುವದರಿಂದ ದೇಶದಲ್ಲಿ ಭ್ರಷ್ಟಾಚಾರ ಕಮ್ಮಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಒಪಿ ಅಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ರಮೇಶ್ ಜಿಗಜಿಣಗಿ ಮತ್ತು ಅನಂತ್ ಕುನಾರ್ ಹೆಗಡೆ ಹಾಗೂ ಮಾಜಿ ಸಿ.ಎಂ.ಜಗದೀಶ್ ಶೆಟ್ಟರ್ಮ ಮಾಜಿ ಡಿಸಿಎಂಗಳಾದ ಕೆ.ಈಶ್ವರಪ್ಪ ಮತ್ತು ಆರ್.ಆಶೋಕ್ ಸೇರಿದಂತೆ ಸಂಸದರು ಮತ್ತು ಶಾಸಕರು ಜಿಲ್ಲಧ್ಯಕ್ಷರು ಹಾಗೂ ಆನೇಕ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಭಾರದ 125 ಕೋಟಿ ಜನರ ಆಶೀರ್ವಾದ ಇರುವ ತನಕ ನಾನು ಕಾಂಗೃಸ್ ಪಕ್ಷಕ್ಕಾಗಲಿ ಅಥವಾ ಪಾಕಿಸ್ತಾನಕ್ಕಾಗಲಿ ಹೆದುರುವುದಿಲ್ಲ ಎಂದು ಪ್ರಧಾನಿ ಹೇಳಿದರು. ದೇಶದ ಜನತೆಗೆ ಸದೃಡ ಮತ್ತು ಒಳ್ಳೆಯ ಆಡಳಿತವನ್ನು ನಾವು ನೀಡಿದ್ದೇವೆ ಎಂದು ಪ್ರಧಾನಿ ಹೇಳಿದರು. ದೇಶದ ಜನತೆಯ ಆಶೀರ್ವಾದ ನನ್ನ ಮೇಲೆಇರುವ ತನಕ ನನ್ನನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು

—–

ಡಾ.ಉಮೇಶ ಜಾ`Àವ್ ಬಿಜೆಪಿ ಸೇರ್ಪಡೆ
ಕಲಬುರಗಿ: ನಗರದ ನೂತನ ವಿದ್ಯಾಲಯ ಮೆ`ದಾನದಲ್ಲಿ ಬು`Àವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಬಹತ್ ಸಮಾವೇಶದಲ್ಲಿ ಬಿಜೆಪಿ ರಾಜ್ಯಾ`À್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದ ಡಾ.ಉಮೇಶ್ ಜಾ`Àವ್ ಅಕೃತವಾಗಿ ಬಿಜೆಪಿ ಸೇರ್ಪಡೆಯಾದರು.
ನಂತರ ಮಾತನಾಡಿದ ಉಮೇಶ್ ಜಾ`Àವ್, ಬಿಜೆಪಿ ರಾಜ್ಯಾ`À್ಯಕ್ಷರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿರುವುದು ನನ್ನ ಜೀವನದ ಬಹುದೊಡ್ಡ ಸಂತಸದ ಘಳಿಗೆ ಎಂದು ಹೇಳಿದರು.
ಅತಿ ಹರ್ಷದಿಂದ ನಾನು ಬಿಜೆಪಿ ಸೇರುತ್ತಿದ್ದು, ತುಂಬಾ ಸಂತೋಷವಾಗುತ್ತಿದೆ. ಪ್ರ`Áನಿ ನರೇಂದ್ರ ಮೋದಿ ನೇತತ್ವದಲ್ಲಿ ದೇಶದಲ್ಲಿ ಸಾಕಷ್ಟು ಅಭಿವದ್ಧಿ ಕೆಲಸಗಳು ಆಗುತ್ತಿವೆ. ಹೀಗಾಗಿ ಮತ್ತೊಮ್ಮೆ ಅವರು ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ದೇಶದ ಪ್ರ`Áನಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮುಂಬರುವ ದಿನಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಇತಿಹಾಸ ಸಷ್ಟಿ ಮಾಡುವುದಿದೆ. ಅಭಿವದ್ಧಿ ಕೆಲಸವೇನೆಂಬುದನ್ನು ಕೆಲವರಿಗೆ ತೋರಿಸುವುದು ಅನಿವಾರ್ಯವಾಗಿದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಕಾಂಗ್ರೆಸ್‍ನವರಿಗೆ ಅಭಿವೃದ್ಧಿ ಬಗ್ಗೆ ಅರಿವಿಲ್ಲ. ಹೀಗಾಗಿ ಜನರ ಸಮಸ್ಯೆಗಳು ಸಾಕಷ್ಟಿವೆ. ಹೀಗಾಗಿ ನಾನು ಮುಂಬರುವ ದಿನಗಳಲ್ಲಿ ಈ ಜಿಲ್ಲೆಯ ಸಮಗ್ರ ಅಭಿವದ್ಧಿಗಾಗಿ ಶ್ರಮಿಸುವೆ ಎಂದು ಇದೇ ಸಂದ`ರ್Àದಲ್ಲಿ `Àರವಸೆ ನೀಡಿದರು.
ಕೆಲ ವರ್ಷಗಳ ಹಿಂದೆ ಪ್ರ`Áನಿಯಾಗಿದ್ದ ದಿ. ಅಟಲ್ ಬಿಹಾರಿ ವಾಜಪೇಯಿ ಕಲಬುರಗಿಗೆ ಬಂದಾಗ ನಾನು ಸಮಾವೇಶದಲ್ಲಿ `Áಗವಹಿಸಿz್ದÉೀ, ಆ ದಿನಗಳ ನೆನಪು ಇಂದು ನನಗೆ ಆಗುತ್ತಿದೆ. ಪ್ರ`Áನಿ ನರೇಂದ್ರ ಮೋದಿ ಸಮಾವೇಶದಲ್ಲಿ ಈಗ ಮತ್ತೊಮ್ಮೆ ಬಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಹಳೆಯ ನೆನಪನ್ನು ಮೆಲಕು ಹಾಕಿದರು. ಬಿ.ಎಸ್.ಯಡಿಯೂರಪ್ಪ ನೇತತ್ವದಲ್ಲಿ ಮುಂಬರುವ ಲೋಕಸ`Á ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಮತ್ತೊಮ್ಮೆ ದೇಶದಲ್ಲಿ ಮೋದಿ ಅವರನ್ನು ಪ್ರ`Áನಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಹೇಳಿದರು.

*PR KULAKARNI*

SNIPA-news-BENGALURU

BUREAU CHIEF AND
CHIEF EDITOR-SAMACHAR NETWORK OF INDIA
9632988005 / 9448247242

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ