ಅಭಿನಂದನ್ ಸುರಕ್ಷಿತವಾಗಿ ವಾಪಸ್ ಬರುತ್ತಾರೆಂಬ ನಂಬಿಕೆಯಿದೆ: ವಿಂಗ್ ಕಮಾಂಡರ್ ತಂದೆಯ ವಿಶ್ವಾಸ

ಮುಂಬೈ: ಪಾಕಿಸ್ತಾನದ​ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್​ ವರ್ದಮಾನ್ ಸುರಕ್ಷಿತವಾಗಿ ವಾಪಸ್​ ಬರುವ ವಿಶ್ವಾಸವಿದೆ ಎಂದು ಅಭಿನಂದನ್​ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ವಾಯು ಪಡೆಯಲ್ಲಿ ಏರ್​ ಮಾರ್ಷಲ್​ ಆಗಿದ್ದು, ಈಗ ನಿವೃತ್ತರಾಗಿರುವ ಎಸ್​. ವರ್ದಮಾನ್​ ಅವರು ಅಭಿನಂದನ್​ ಸೆರೆ ಸಿಕ್ಕಿದ್ದರೂ ಒಬ್ಬ ನಿಜವಾದ ಯೋಧನಂತೆ ವರ್ತಿಸುತ್ತಿದ್ದಾರೆ. ಪಾಕ್​ ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ವಿಡಿಯೋವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಪಾಕ್​ ನೆಲದಲ್ಲಿ ಯಾವುದೇ ಸಮಸ್ಯೆಯಾಗದೆ ನನ್ನ ಪುತ್ರ ಸ್ವದೇಶಕ್ಕೆ ಮರಳುತ್ತಾರೆ. ನನಗೆ ಆತನ ಬಗ್ಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

ಈ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಕುಟುಂಬಕ್ಕೆ ಬೆಂಬಲ ಸೂಚಿಸುತ್ತಿರುವ ಹಾಗೂ ಅಭಿನಂದನ್​ ಬಿಡುಗಡೆಗಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ನಾನು ಆಭಾರಿ. ನಿಮ್ಮ ಬೆಂಬಲವೇ ನಮಗೆ ಕಠಿಣ ಸಂದರ್ಭವನ್ನು ಎದುರಿಸಲು ಧೈರ್ಯ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

Hope he returns home safe: Father of IAF pilot held by Pakistan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ