ಪಾಕಿಸ್ತಾನಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯದ ಖಡಕ್ ಎಚ್ಚರಿಕೆ

ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಸುರಕ್ಷಿತವಾಗಿ ಶೀಘ್ರವೇ ವಾಪಸ್ ಕಳುಹಿಸಿಕೊಡಿ. ನಮ್ಮ ಪೈಲಟ್ ಗೆ ತೊಂದರೆಯಾದರೆ ಕಾರ್ಯಾಚರಣೆಗೆ ಸಿದ್ಧ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಪಾಕ್ ಗೆ ಎಚ್ಚರಿಕೆ ನೀಡಿದೆ.

ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯದ ಉನ್ನತ ಮೂಲಗಳು ಮಾಹಿತಿ ನೀಡಿದ್ದು, ಭಾರತೀಯ ಪೈಲಟ್ ನನ್ನು ಶೀಘ್ರವೇ ವಾಪಸ್ ಕಳುಹಿಸಿಕೊಡಬೇಕು. ಪೈಲಟ್ ಗೆ ಏನಾದರೂ ಆದರೆ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತೇವೆ ಎಂದು ಭಾರತ ಖಡಕ್ ಎಚ್ಚರಿಕೆ ನೀಡಿದೆ.

ನಮ್ಮ ಪೈಲಟ್ ಸುರಕ್ಷಿತವಾಗಿ ವಾಪಸ್ ಬರಬೇಕು. ಪೈಲಟ್ ಗೆ ಯಾವುದೇ ರೀತಿಯ ತೊಂದರೆಯನ್ನೂ ನೀಡಬಾರದು. ಅಲ್ಲದೇ ಪೈಲಟ್ ಬಿಡುಗಡೆಗೆ ಯಾವುದೇ ಷತ್ತುಗಳನ್ನು ಒಪ್ಪಿಕೊಳ್ಳುವುದಿಲ್ಲ. ನಮಗೆ ಮೂರನೆಯವರ ಮಧ್ಯಸ್ಥಿಕೆಯ ಅವಶ್ಯಕತೆಯಿಲ್ಲ. ನಮ್ಮ ಪೈಲಟ್ ಗೆ ಏನಾದರೂ ಆದರೆ ದಾಳಿ ನಡೆಸುವುದು ನಿಶ್ಚಿತ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪಾಕಿಸ್ತಾನ ಉಗ್ರರನ್ನು ರಕ್ಷಣೆ ಮಾಡುತ್ತಿರುವುದು ಸ್ಪಷ್ಟ. ಉಗ್ರರ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮಗಳನ್ನು ಕೈಗೊಂಡರೆ ಮಾತ್ರ ಮಾತುಕತೆಗೆ ಸಿದ್ಧ ಎಂದು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

Indian Foreign Ministry,warns, to Pakistan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ