
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ರಾಜ್ಯದ ಜನ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳಿಗೆ ಆಶೀರ್ವಾದ ಮಾಡಿದರೆ ಸುಮಾರು 20-22 ಸ್ಥಾನಗಳನ್ನ ಗೆಲ್ಲಬಹುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮತ್ತೊಮ್ಮೆ ನಮಗೇ ಆಶೀರ್ವಾದ ಮಾಡಿದರೆ ಈ ಫಲಿತಾಂಶ ಬರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದಿರುವ ಸಿಎಂ, ನೀವು ಇಂತಹ ಫಲಿತಾಂಶ ನೀಡುವಲ್ಲಿ ಯಶಸ್ವಿಯಾದರೆ ಕನ್ನಡಿಗ ಒಬ್ಬ ಮತ್ತೊಮ್ಮೆ ದೇಶದ ಪ್ರಧಾನಿ ಆಗುವುದೇನೂ ಅಸಾಧ್ಯವಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಏನ್ ಬೇಕಾದರೂ ಆಗಬಹುದು. ಕನ್ನಡಿಗ ಮತ್ತೊಮ್ಮೆ ಪ್ರಧಾನಿ ಆಗಲ್ಲ ಎಂದು ಹೇಳಲು ಸಾಧ್ಯವೇ.. ಯಾಕೆ ಇಂತಹ ಘಟನೆ ಮರುಕಳಿಸಬಾರದು ಎಂದು ಪ್ರಶ್ನಿಸಿದ್ದಾರೆ.
Lok Sabha election,CoNgress-JDS,CM H D Kumaraswamy