ಪ್ರಿಯಾಂಕಾ ಗಾಂಧಿಗೆ ಎಐಸಿಸಿ ಕೇಂದ್ರ ಕಛೇರಿಯಲ್ಲಿ ಪ್ರತ್ಯೇಕ ಕಚೇರಿ

ನವದೆಹಲಿ: ಇತ್ತೀಚೆಗೆ ಸಕ್ರಿಯ ರಾಜಕಾರಣಕ್ಕೆ ಸೇರಿದ್ದ ಪ್ರಿಯಾಂಕಾ ಗಾಂಧಿ ಅವರಿಗೆ ನವದೆಹಲಿಯ ಎಐಸಿಸಿ ಪಕ್ಷದ ಕೇಂದ್ರ ಕಛೇರಿಯಲ್ಲಿ ಪ್ರತ್ಯೇಕ ಕಚೇರಿಯನ್ನ ನೀಡಲಾಗಿದೆ.

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಅಧಿಕೃತವಾಗಿ ಪಕ್ಷದ ಕಾರ್ಯಚಟುವಟಿಕೆಗಳಿಗೆ ಕರೆತಂದಿತ್ತು. ಈ ಹಿನ್ನಲೆಯಲ್ಲಿ ಪ್ರಿಯಾಂಕ ಗಾಂಧಿ ಅವರನ್ನ ಉತ್ತರಪ್ರದೇಶ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.

ಉತ್ತರಪ್ರದೇಶದಲ್ಲಿ ಮಾಯಾವತಿ ಹಾಗೂ ಅಖಿಲೇಶ್​ ಯಾದವ್​, ಕಾಂಗ್ರೆಸ್​ ಅನ್ನು ಹೊರಗಿಟ್ಟೇ ಮೈತ್ರಿ ಮಾಡಿಕೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡ ರಾಹುಲ್​, ಸಹೋದರಿ ಪ್ರಿಯಾಂಕಳನ್ನ ಅಧಿಕೃತವಾಗಿ ಪಕ್ಷದಲ್ಲಿ ಸ್ಥಾನ ಮಾನ ಕಲ್ಪಿಸಿ ಅಖಾಡಕ್ಕಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ನವದೆಹಲಿ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪ್ರಿಯಾಂಕಗೆ ಕಛೆರಿಯೊಂದನ್ನು ನೀಡಲಾಗಿದ್ದು, ಸಿಬ್ಬಂದಿ ಅವರಿಗೆ ಅಲಾಟ್ ಮಾಡಲಾದ ರೂಮ್​ಗೆ ಪ್ರಿಯಾಂಕ ಗಾಂಧಿ ಅವರ ನೇಮ್​ ಪ್ಲೇಟ್​ ಅಳವಡಿಕೆ ಮಾಡಿದ್ದಾರೆ.

Lok Sabha Elections 2019, Priyanka Gandhi Vadra’s, Office

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ