ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಂದ ಸಾಮೂಹಿಕ ಕೇಶ ಮುಂಡನ

ತುಮಕೂರು: ಸಿದ್ಧಗಂಗಾ ಮಠದ ವಿದ್ಯಾರ್ಥಿಗಳು ಮಂಗಳವಾರ ಸಾಮೂಹಿಕವಾಗಿ ಕೇಶಕರ್ತನ ಹಾಗೂ ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ನಮನ ಸಲ್ಲಿಸಿದರು.

ಸವಿತಾ ಸಮಾಜದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೇಶಮುಂಡನ ಮತ್ತು ಕೇಶ ಕರ್ತನ ಮಾಡಲಾಯಿತು.

ಈ ಹಿಂದೆ ವಿದ್ಯಾರ್ಥಿಗಳ ಸಾಮೂಹಿಕ ಕೇಶಮುಂಡನಕ್ಕೆ ಮಾತೆ ಮಹಾದೇವಿ ಅವರು ವಿರೋಧ ವ್ಯಕ್ತಪಡಿಸಿದ್ದರು. ಲಿಂಗಾಯಿತ ವೀರಶೈವ ಸಮಾಜದ ಪದ್ಧತಿಯಲ್ಲಿ ಕೇಶಮುಂಡನಕ್ಕೆ ಅವಕಾಶವಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ, ಲಿ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಹಿಂದೂ, ಮುಸಲ್ಮಾನ್, ಕ್ರಿಶ್ಚಿಯನ್ ಸೇರಿದಂತೆ ಎಲ್ಲರೂ ಪ್ರೀತಿಸುತ್ತಾರೆ. ಶ್ರೀಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ ಎಂದು ತಿಳಿಸಿದ್ದರು.

ಪ್ರತಿ ವರ್ಷದಂತೆ ಈ ಬಾರಿಯೂ ಸವಿತಾ ಸಮಾಜದ ಬಂಧುಗಳು ಮಠದ ಮಕ್ಕಳಿಗೆ ಹೇರ್ ಕಟಿಂಗ್ ಮಾಡುತ್ತಾರೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಕ್ಕಳಿಗೆ ಕೇಶ ಕರ್ತನ (ಹೇರ್ ಕಟಿಂಗ್) ಮಾಡುತ್ತಾರೆಯೇ ಹೊರತು ಕೇಶಮುಂಡನ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಅಲ್ಲದೇ ಶ್ರೀ ಮಠದ ಮಕ್ಕಳಿಗೆ ಕೇಶಮುಂಡನ ಮಾಡಿಸಿಕೊಳ್ಳುವಂತೆ ಯಾರಿಗೂ ಹೇಳಿಲ್ಲ. ಒತ್ತಾಯವನ್ನೂ ಮಾಡಿಲ್ಲ.

ಇಚ್ಛೆ ಇದ್ದವರು ಕೇಶ ಮುಂಡನ ಮಾಡಿಸಿಕೊಳ್ಳಬಹುದು ಎಂದಿದ್ದರು.

ಸವಿತಾ ಸಮಾಜದವರು ಪ್ರತಿ ವರ್ಷ ಸ್ವಇಚ್ಛೆಯಿಂದ ನಡೆಸಿಕೊಂಡು ಬಂದಿರುವ ಕೆಲಸದಂತೆ ಈ ಬಾರಿಯೂ ಮಾಡಲಾಗುತ್ತೆ ಅಷ್ಟೇ ಎಂದು ತಿಳಿಸಿದ್ದರು.

ಅದರಂತೆ ಸದ್ಯ ಶ್ರೀ ಮಠದ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಕೇಶ ಕರ್ತನ ಮತ್ತು ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ಲಿ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಕ್ತಿ ಸಮರ್ಪಣೆ ಮಾಡಿದರು. ಈ ಸಾಮೂಹಿಕ ಕೇಶ ಮಂಡನ ಕಾರ್ಯಕ್ರಮಕ್ಕೆ ಸವಿತಾ ಸಮಾಜ ಗುರುಪೀಠದ ಶ್ರೀ ಶ್ರೀಧರ ಆನಂದ ಸ್ವಾಮೀಜಿಗಳು ಸೇರಿದಂತೆ ರಾಜ್ಯದ ಸವಿತಾ ಸಮಾಜದ ಮುಖಂಡರುಗಳು ಸದಸ್ಯರು ಗಳು ಭಾಗವಹಿಸಿ ದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ