ಜೇಟ್ಲಿ ಶೀಘ್ರವೇ ಗುಣಮುಖರಾಗಲಿ: ಗಣ್ಯಾತಿಗಣ್ಯರ ಹಾರೈಕೆ

New Delhi: Finance Minister Arun Jaitley addressing a press conference at North Block in New Delhi on Tuesday. PTI Photo by Manvender Vashist (PTI3_14_2017_000123B)

ನವದೆಹಲಿ: ಅನಾರೋಗ್ಯಕ್ಕೀಡಾಗಿರುವ ಅರುಣ್​ ಜೇಟ್ಲಿ ಶೀಘ್ರವೇ ಗುಣಮುಖರಾಗಲಿ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ಜಮ್ಮುಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ, ಹಿರಿಯ ಕಾಂಗ್ರೆಸ್​ ಮುಖಂಡ ಸಲ್ಮಾನ್​ ಖುರ್ಷಿದ್​, ಆರ್​ಜಿಡಿ ಅಧ್ಯಕ್ಷ ಲಾಲೂಪ್ರಸಾದ್​ ಯಾದವ್​ ಮತ್ತಿತರರು ಹಾರೈಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ರಾಹುಲ್ ಗಾಂಧಿ, ವಿತ್ತ ಸಚಿವ ಅರುಣ್​ ಜೇಟ್ಲಿ ಆರೋಗ್ಯ ಸರಿಯಿಲ್ಲವೆಂದು ಕೇಳಿ ಮನಸಿಗೆ ಬೇಸರವಾಗಿದೆ. ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ಅವರೊಂದಿಗೆ ದಿನನಿತ್ಯ ಸಣ್ಣಪುಟ್ಟ ಜಗಳವಾಡುತ್ತಿದ್ದೆ. ಅವರು ಶೀಘ್ರ ಗುಣಮುಖರಾಗಲೆಂದು ನಾನು ನನ್ನ ಪಕ್ಷದ ಪರವಾಗಿ ಪ್ರೀತಿಯಿಂದ ಹಾರೈಸುತ್ತೇನೆ. ನಿಮ್ಮ ಈ ಕಷ್ಟದ ಸಮಯದಲ್ಲಿ ನಾವು ನಿಮ್ಮೊಂದಿಗೆ ಹಾಗೂ ನಿಮ್ಮ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್​ ಚೌಹಾಣ್​, ಜಮ್ಮುಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್​ ಅಬ್ದುಲ್​, ಕಾಂಗ್ರೆಸ್​ ಮುಖಂಡ ಸಲ್ಮಾನ್​ ಖುರ್ಷಿದ್​ ಸೇರಿ ಹಲವು ಬಿಜೆಪಿ ನಾಯಕರು, ಪ್ರತಿಪಕ್ಷಗಳ ಮುಖಂಡರು ಅರುಣ್​ ಜೇಟ್ಲಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಜೇಟ್ಲಿ ವೈದ್ಯಕೀಯ ತಪಾಸಣೆಗಾಗಿ ಭಾನುವಾರವೇ ಯುಎಸ್​ಗೆ ತೆರಳಿದ್ದಾರೆ. ಕಳೆದ ವರ್ಷ ಮೇ ನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಸಹಜ ತಪಾಸಣೆಗೆ ಹೋಗಿದ್ದರೆಂದು ನಂಬಲಾಗಿತ್ತು. ಆದರೆ ಜೇಟ್ಲಿ ಅವರು ಮೃದು ಅಂಗಾಂಶ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಅದಕ್ಕೆ ಸಂಬಂಧಪಟ್ಟ ಚಿಕಿತ್ಸೆಗಾಗಿ ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿ. ಅವರ ದೇಹದಲ್ಲಿ ಗಡ್ಡೆಯಾಗಿದ್ದು, ಅದು ಇತರ ಭಾಗಗಳಿಗೆ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಹಾಗಾಗಿ ಫೆ.1ರಂದು ಕೇಂದ್ರ ಸರ್ಕಾರದ ಕೊನೇ ಬಜೆಟ್​ನ್ನು ಮಂಡಿಸಲು ಅವರು ಆಗಮಿಸುವುದು ಅನುಮಾನ ಎಂದು ಹೇಳಲಾಗಿದೆ.
Arun Jaitley, New York, Cancer Treatment,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ