ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾಗೆ ಸ್ವೈನ್ ಫ್ಲು

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅನಾರೋಗ್ಯಕ್ಕೀಡಾಗಿದ್ದು, ಸ್ವೈನ್ ಫ್ಲ್ಯೂ ನಿಂದ ಬಳತ್ತಿದ್ದಾರೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಏಮ್ಸ್​ಗೆ ದಾಖಲಾಗಿದ್ದಾರೆ.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಕೂಡ ಅನಾರೋಗ್ಯ ನಿಮಿತ್ತ ಏಮ್ಸ್​ಗೆ ಮಂಗಳವಾರ ದಾಖಲಾಗಿದ್ದರು. ಇನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕಿಡ್ನಿ ಕಸಿಯ ಹೆಚ್ಚಿನ ಚಿಕಿತ್ಸೆಗೆ ಅಮೆರಿಕಕ್ಕೆ ತೆರಳಿದ್ದಾರೆ. ಈ ನಡುವೆ ಷಾ ಅವರು ಏಮ್ಸ್​ಗೆ ದಾಖಲಾಗಿದ್ದಾರೆ. ಈ ವಿಚಾರವನ್ನು ಖುದ್ದು ಅಮಿತ್ ಷಾ ಬಹಿರಂಗಪಡಿಸಿದ್ದಾರೆ.

ಚಿಕಿತ್ಸೆ ನಡೆಯುತ್ತಿದೆ. ದೇವರು ಹಾಗೂ ಜನರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ನಾಯಕರ ಅನಾರೋಗ್ಯದ ಹಿನ್ನಲೆಯಲ್ಲಿ ಜ.20ರಿಂದ ನಡೆಯಬೇಕಿದ್ದ ಪಶ್ಚಿಮಬಂಗಾಳ ಸರಣಿ ಸಾರ್ವಜನಿಕ ಸಭೆ ಮತ್ತೆ ಮುಂದೆ ಹೋಗುವ ಸಾಧ್ಯತೆಯಿದೆ.

BJP Chief Amit Shah Down With Swine Flu, Being Treated At Delhi’s AIIMS

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ