ರಾಹುಲ್ ದುಬೆ ಟೈಮ್ ಹೀರೋಸ್‍ಗೆ ಭಾಜನ

ನ್ಯೂಯಾರ್ಕ್: ಕಳೆದ ಜೂನ್ 1ರಂದು ಆಫ್ರಿಕನ್ ಅಮೆರಿಕನ್ ಪ್ರಜೆಯಾದ ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಅಮೆರಿಕದಲ್ಲಿ ನಡೆದ ಜನಾಂಗೀಯ ಗಲಭೆ ವೇಳೆ ಪ್ರತಿಭಟನಾಕಾರರಿಗೆ ತಮ್ಮ ಮನೆಯ ಬಾಗಿಲನ್ನು ತೆರೆದಿಟ್ಟಿದ್ದ ಭಾರತೀಯ ಅಮೆರಿಕನ್ ರಾಹುಲ್ ದುಬೆ ಅವರು ಈ ವರ್ಷದ ಟೈಮ್ ನಿಯತಕಾಲಿಕೆಯ ಹೀರೋಸ್ ಗೌರವಕ್ಕೆ ಭಾಜನರಾಗಿದ್ದಾರೆ.
ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ 70ಕ್ಕೂ ಹೆಚ್ಚು ಜನರಿಗೆ ತನ್ನ ವಾಷಿಂಗ್ಟನ್ ಡಿಸಿ ಮನೆಯಲ್ಲಿ ಆಶ್ರಯ ನೀಡಿದ ಭಾರತೀಯ-ಅಮೆರಿಕನ್ ರಾಹುಲ್ ದುಬೆ , ಟೈಮ್‍ನ 2020ರ ಹೀರೋಸ್ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಟೈಮ್‍ನ 2020ರ ಹಿರೋಸ್ ಪ್ರಕಟಣೆಯಲ್ಲಿ ತಮ್ಮ ರಾಷ್ಟ್ರದ ಸುರಕ್ಷತೆಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಆಸ್ಟ್ರೇಲಿಯಾದ ಸ್ವಯಂಸೇವಕ ಅಗ್ನಿ ಶಾಮಕ ದಳದವರನ್ನೂ ಹೆಸರಿಸಲಾಗಿದೆ. ಅದೇ ರೀತಿ ಸಿಂಗಾಪುರದಲ್ಲಿ ಕೊರೋನಾ ಸಂದರ್ಭದಲ್ಲಿ ಯಾರನ್ನೂ ಹಸಿವೆಗೆ ದೂಡದ ಆಹಾರ ಮಳಿಗೆಯ ಮಾಲೀಕರಾಗಿರುವ ಜೇಸನ್ ಚೌ ಮತ್ತು ಹಂಗ್ ಜೆನ್ ಲಾಂಗ್ ಕಾರ್ಯವು ಸಹ ಪ್ರಶಂಸೆ ಗಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ