ನವದೆಹಲಿ: ಅಂಡಮಾನ್-ನಿಕೋಬಾರ್ ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅಲ್ಲಿನ ಮೂರು ದ್ವೀಪಗಳಿಗೆ ಹೊಸ ನಾಮಕರಣ ಮಾಡಿದ್ದಾರೆ. ಹೊಸ ಹೆಸರ ಪ್ರಧಾನಿ ಮೋದಿ ಅಧಿಕೃತವಾಗಿ ಘೋಷಣೆ ಮಾಡಿದರು.
ನೇತಾಜಿ ಸುಭಾಷ್ಚಂದ್ರ ಭೋಸ್ ಅವರು ಪೋರ್ಟ್ ಬ್ಲೇರ್ನಲ್ಲಿ ಭಾರತ ಧ್ವಜ ಹಾರಿಸಿದ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅಂಡಮಾನ್ ನಿಕೋಬಾರ್ ಗೆ ಭೇಟಿ ನೀಡಿದ ಮೋದಿ, ಅಲ್ಲಿನ ಮೂರು ದ್ವೀಪಗಳಿಗೆ ಹೊಪ್ಸ ಹೆಸರನ್ನಿಟ್ಟಿದ್ದಾರೆ.
ರೋಸ್ಲ್ಯಾಂಡ್ಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ, ನೇಲ್ ಐಸ್ಲ್ಯಾಂಡ್ಗೆ ಶಾಹೀದ್ ದ್ವೀಪ ಮತ್ತು ಹಾವ್ಲಾಕ್ ದ್ವೀಪಕ್ಕೆ ಸ್ವರಾಜ್ ದ್ವೀಪವೆಂದು ಮರುನಾಮಕರಣ ಮಾಡಿರುವುದಾಗಿ ಪ್ರಧಾನಿ ಘೋಷಿಸಿದ್ದಾರೆ.
ಇದೇ ವೇಳೆ ಸ್ಮರಣಾರ್ಥ ಅಂಚೆಚೀಟಿ, 75 ನಾಣ್ಯಗಳನ್ನೂ ಬಿಡುಗಡೆ ಮಾಡಿದರು. ಅಲ್ಲದೆ ದಿ.ಬೋಸ್ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಿದರು. ಅದಕ್ಕೂ ಮೊದಲು ಮರೀನಾ ಪಾರ್ಕ್ಗೆ ತೆರಳಿದ ಪ್ರಧಾನಿ ಮೋದಿ, 150 ಅಡಿ ಎತ್ತರದಲ್ಲಿ ಭಾರತದ ಧ್ವಜ ಹಾರಿಸಿದರು. ಹಾಗೇ ಅಲ್ಲಿಯೇ ಇದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
Prime Minister Narendra Modi,announced renaming of three islands,Andaman and Nicobar