ಪೆಟ್ರೋಲ್-ಡೀಸೆಲ್ ದರದಲ್ಲಿ ಇಂದು ಕೂಡ ಏರಿಕೆ

ನವದೆಹಲಿ: ಭಾರತದಲ್ಲಿ ತೈಲೋತ್ಪನ್ನಗಳ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಪ್ರತಿ ಲೀಟರ್ ಗೆ ಕ್ರಮವಾಗಿ 10 ಪೈಸೆ ಹಾಗೂ ಡೀಸೆಲ್ 7 ಪೈಸೆ ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದರೂ ಭಾರತೀಯ ತೈಲ ಮಾರುಕಟ್ಟೆಯಲ್ಲಿ ಮಾತ್ರ ತೈಲೋತ್ಪನ್ನಗಳ ಬೆಲೆ ಸತತ ಎರಡನೇ ದಿನವೂ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 70.63 ರೂ (10 ಪೈಸೆ ಏರಿಕೆ), ಮತ್ತು ಡೀಸೆಲ್‌ ದರ 64.54 ರೂ (07 ಪೈಸೆ ಏರಿಕೆ) ಇದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇಂದಿನ ಪೆಟ್ರೋಲ್‌ ದರ 76.21 ರೂ (10 ಪೈಸೆ ಏರಿಕೆ), ಡೀಸೆಲ್ ಬೆಲೆ 67.52 ರೂ (08 ಪೈಸೆ ಏರಿಕೆ) ಆಗಿದೆ.
ಕೋಲ್ಕತಾದಲ್ಲಿ ಇಂದಿನ ಪೆಟ್ರೋಲ್‌ ಬೆಲೆ 72.68 ರೂ (10 ಪೈಸೆ ಏರಿಕೆ) ಮತ್ತು ಡೀಸೆಲ್ ಬೆಲೆ 66.27 ರೂ (07 ಪೈಸೆ ಏರಿಕೆ) ಗಳಾಗಿವೆ. ಚೆನ್ನೈನಲ್ಲಿ ಇಂದಿನ ಪೆಟ್ರೋಲ್‌ ಬೆಲೆ 73.26 ರೂ. (11 ಪೈಸೆ ಏರಿಕೆ), ಡೀಸೆಲ್‌ ಬೆಲೆ 68.11 ರೂ (07 ಪೈಸೆ ಏರಿಕೆ) ಆಗಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್‌ ದರ ಲೀಟರ್‌ಗೆ 71.17 ರೂ (10 ಪೈಸೆ ಏರಿಕೆ) ಮತ್ತು ಡೀಸೆಲ್‌ ದರ 64.87 (07 ಪೈಸೆ ಏರಿಕೆ) ರೂ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್ ಗೆ ಇಂದಿನ ಬೆಲೆ 3,606 ರೂ (84 ರೂ ಇಳಿಕೆ) ಆಗಿದ್ದರೂ ಭಾರತೀಯ ಮಾರುಕಟ್ಟೆಗೆ ಅನುಸಾರವಾಗಿ ತೈಲೋತ್ಪನ್ನ ದರಗಳು ಅಲ್ಪ ಪ್ರಮಾಣದ ಏರಿಕೆ ಕಂಡಿವೆ.

petrol,diesel,price hike

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ