ಪೆಟ್ರೋಲ್-ಡೀಸೆಲ್ ದರದಲ್ಲಿ ಇಂದೂ ಕೂಡ ಇಳಿಕೆ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಇಂಧನ ಬೆಲೆಯು ಇಳಿಕೆಯಾಗುತ್ತಿದ್ದು, ಇಂದೂ ಕೂಡ ಪೆಟ್ರೋಲ್‌ 35 – 37 ಪೈಸೆ ಮತ್ತು ಡೀಸೆಲ್‌ಗೆ 41 – 43 ಪೈಸೆ ಇಳಿಕೆಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ಗೆ 35 ಪೈಸೆ ಇಳಿಕೆಯಾಗುವ ಮೂಲಕ 75.08 ರೂ.ಗಳಷ್ಟಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ 42 ಪೈಸೆ ಇಳಿಕೆಯಾಗಿ 69.65 ರೂ.ಗೆ ಮಾರಾಟವಾಗುತ್ತಿದೆ.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ವೆಬ್‌ಸೈಟ್‌ನಲ್ಲಿ ನೀಡಿರುವಂತೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ 41 ಪೈಸೆ ಕಡಿಮೆಯಾಗಿ 74.49 ರೂ.ಗಳಷ್ಟಾಗಿದೆ. ಡೀಸೆಲ್‌ ಲೀ.ಗೆ ಭಾನುವಾರ 69.70 ರೂ ಇದ್ದದ್ದು ಇಂದು 69.29 ರೂ.ಗೆ ಮಾರಾಟವಾಗುತ್ತಿದೆ.

ಚೆನ್ನೈನಲ್ಲಿ ಲೀ. ಪೆಟ್ರೋಲ್‌ಗೆ 37 ಪೈಸೆ ಕಡಿಮೆಯಾಗಿ 77.32, ಕೋಲ್ಕತಾದಲ್ಲಿ 35 ಪೈಸೆ ಕಡಿಮೆಯಾಗುವ ಮೂಲಕ 76.47ರೂ. ಇದ್ದರೆ, ಡೀಸೆಲ್‌ ಲೀಟರ್‌ಗೆ 73.20 ರೂ. ಮತ್ತು 71.14 ರೂ.ಗಳಷ್ಟಿದೆ.

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ನವೆಂಬರ್‌ ವೊಂದರಲ್ಲಿಯೇ ಅಧಿಕ ಬೆಲೆ ಇಳಿಕೆಗೆ ಕಾರಣವಾಗಿದ್ದು, ಪೆಟ್ರೋಲ್‌ ಬೆಲೆ ಸುಮಾರು 5 ರೂ. ಕಡಿಮೆಯಾಗಿದ್ದರೆ, ಡೀಸೆಲ್‌ಗೆ 4.70 ರೂ. ಕಡಿಮೆಯಾಗಿದೆ.

petrol,diesel, price droping

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ