ಉಗ್ರ ಹಫೀಜ್ ಸಯೀದ್ ಮತ್ತು ಆತನ ಪಕ್ಷವನ್ನು ರಕ್ಷಿಸುವುದಾಗಿ ಘೋಷಿಸಿದ ಪಾಕಿಸ್ತಾನ ಸಚಿವ

ಲಾಹೋರ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದನೆ ನಿಗ್ರಹದ ಕ್ರಮಗಳಿಗೆ ಮುಂದಾಗುತ್ತಿರುವುದಾಗಿ ಹೇಳಿಕೆನ್ನು ನೀಡಿದ ಬೆನ್ನಲ್ಲೇ ಅವರ ಸಂಪುಟ ಸಚಿವರೊಬ್ಬರು 2008ರ ಮುಂಬೈ ದಾಳಿಕೋರ ಹಫೀಜ್ ಸಯೀದ್ ಮತ್ತು ಆತನ ಪಕ್ಷವನ್ನು ರಕ್ಷಿಸಲು ಶಪಥ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾಕ್ ಆಂತರಿಕ ರಾಜ್ಯ ಸಚಿವ ಶೆಹ್ಯಾಯಾರ್ ಆಫ್ರಿದಿ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ನಾಯಕರೊಂದಿಗೆ ಮಾತನಾಡುತ್ತಾ ಅಮೆರಿಕದ ಒತ್ತಡದಿಂದಾಗಿ ಸಯೀದ್ ಪಕ್ಷವನ್ನು ಚುನಾವಣಾ ಆಯೋಗ(ಇಸಿಪಿ)ಯಿಂದ ರಾಜಕೀಯ ಪಕ್ಷವಾಗಿ ನೋಂದಾಯಿಸದೆ ಅವರ ಗಮನವನ್ನು ಸೆಳೆಯಲಾಯಿತು. ಇದು ಒಂದು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸುವುದು ಇಸಿಪಿ ಯೋಜನೆ ಆಗಿತ್ತು. ಆದರೆ ಇದು ಸಂಭವಿಸಲು ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ.

ನಮ್ಮ ಪಕ್ಷ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಅಧಿಕಾರದಲ್ಲಿರುವವರೆಗೂ ಪಾಕಿಸ್ತಾನಕ್ಕಾಗಿ ಧ್ವನಿ ಎತ್ತುತ್ತಿರುವ ಹಫೀಜ್ ಸಯೀದ್ ಸೇರಿದಂತೆ ಇತರರಿಗೂ ನಾವು ಬೆಂಬಲವನ್ನು ನೀಡುತ್ತೇವೆ ಎಂದು ಆಫ್ರಿದಿ ಘೋಷಿಸಿದ್ದಾರೆ.

ಸಂಸತ್ ಗೆ ಬಂದು ನಾವು ಸರಿಯಾದ ದಾರಿಯಲ್ಲಿರುವವರನ್ನು ಬೆಂಬಲಿಸುತ್ತೇವೆಯೇ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಿ ಎಂದು ಎಂಎಂಎಲ್ ಸದಸ್ಯರಿಗೆ ವಿನಂತಿಸಿದ್ದಾರೆ.

pakistan interior minister,shehryar afridi,vowing to ‘protect’ Hafiz Saeed

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ