ಪೆಟ್ರೋಲ್- ಡಿಸೆಲ್ ದರ ಇಂದೂ ಕೂಡ ಇಳಿಕೆ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕುಸಿತಗೊಂಡ ಹಿನ್ನಲೆಯಲ್ಲಿ ಇಂದೂ ಕೂಡ ಪೆಟ್ರೋಲ್‌, ಡೀಸೆಲ್ ದರ ಇಳಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಧನ ಬೆಲೆಯಲ್ಲಿ ಇಳಿಕೆಯಾಗಿದ್ದು, 1 ಲೀ. ಪೆಟ್ರೋಲ್‌ಗೆ 19 ಪೈಸೆ ಕಡಿಮೆಯಾಗುವ ಮೂಲಕ 76.91 ರೂ.ಗಳಷ್ಟಿದ್ದರೆ, ಡೀಸೆಲ್‌ ಲೀಟರ್‌ಗೆ 19 ಪೈಸೆ ಕಡಿಮೆಯಾಗಿ 71.74 ರೂ.ಗಳಿಗೆ ಮಾರಾಟವಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಇಂಧನ ಬೆಲೆ ಇಳಿಕೆಯಾಗಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ 77.52 ರೂ. ಮತ್ತು ಡೀಸೆಲ್‌ ಲೀ.ಗೆ 72.12 ರೂ.ಗೆ ಮಾರಾಟವಾಗುತ್ತಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಲೀ. ಪೆಟ್ರೋಲ್‌ 82.43 ರೂ.ಗಳಷ್ಟಿದ್ದು, ಇಂದು 19 ಪೈಸೆ ಕಡಿಮೆಯಾಗಿದೆ. ಅದರಂತೇ ಡೀಸೆಲ್‌ಗೆ 20 ಪೈಸೆ ಕಡಿಮೆಯಾಗಿದ್ದು, 75.16 ರೂ.ಗೆ ಗ್ರಾಹಕರಿಗೆ ಸಿಗುತ್ತಿದೆ.

Petrol, diesel prices, slashed by 19 paise

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ