ಎರಿಕ್‌ ಟ್ರ್ಯಾಪಿಯರ್‌ ಯಾರೋ ಬರೆದುಕೊಟ್ಟಂತೆ ಉತ್ತರ ನೀಡಿದ್ದಾರೆ: ಕಾಂಗ್ರೆಸ್

ನವದೆಹಲಿ: ರಾಫೆಲ್ ಫೈಟರ್ ಜಟ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಎರಿಕ್‌ ಟ್ರ್ಯಾಪಿಯರ್‌ ಅವರು ನೀಡಿರುವ ಹೇಳಿಕೆ ಸ್ವಂತ ಅವರ ಹೇಳಿಕೆಯಲ್ಲ, ಯಾರೋ ಬರೆದುಕೊಟ್ಟನ್ನು ಅವರು ಹೇಳಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ರಾಫೆಲ್ ಯುದ್ಧ ವಿಮಾನ ವಿಚಾರವಾಗಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆಯ ಆಯ್ಕೆ ನಾವು ಮಾಡಿದ್ದೇ ಹೊರತು, ಇದರಲ್ಲಿ ಬೇರೆಯವರ ಹಸ್ತಕ್ಷೇಪವಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪ ಸುಳ್ಳು ಎಂದು ಎರಿಕ್‌ ಟ್ರ್ಯಾಪಿಯರ್‌ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.

ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿರುವಂತೆಯೇ ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಪಕ್ಷ, ಎರಿಕ್ ತಮ್ಮ ಸಂದರ್ಶನದಲ್ಲಿ ಯಾರೋ ಬರೆದುಕೊಟ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದೆನಿಸುತ್ತಿದೆ ಎಂದು ಹೇಳಿದೆ. ಅಂತೆಯೇ ಎರಿಕ್ ಸುಳ್ಳು ಹೇಳಿ ತೇಪೆ ಹಾಕಬಹುದು. ಆದರೆ ಈ ಹಗರಣವನ್ನು ಮುಚ್ಚಿಹಾಕಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

Rafale deal,Congress,Dassault Aviation CEO,Eric Trappier

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ