ದಾಂತೇವಾಡ: ಛತ್ತೀಸ್ಗಢದ ದಾಂತೇವಾಡದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದ್ದಾರೆ. ದಾಂತೇವಾಡದ ಬಚೆಲಿಯಲ್ಲಿ ನಕ್ಸಲರು ಸುಧಾರಿತ ಸ್ಪೋಟಕಗಳನ್ನು ಸ್ಫೋಟಿಸಿದ್ದು ಓರ್ವ ಭದ್ರತಾ ಪಡೆ ಸಿಬ್ಬಂದಿ ಮತ್ತು ಮೂವರು ನಾಗರಿಕರು ಮೃತಪಟ್ಟಿದ್ದಾರೆ.
ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಂತೆಯೇ ಜಿಲ್ಲೆಯ ಬಚೇಲಿ ಪ್ರದೇಶದಲ್ಲಿ ನಕ್ಸಲರ ದಾಳಿ ಮುಂದುವರೆದಿದೆ. ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿ ನಕಲರು ಬಸ್ನಲ್ಲಿ ಸ್ಫೋಟಿಸಿ ಹಿನ್ನಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಯ ಇಬ್ಬರು ಯೋಧರು ಮತ್ತು ಮೂವರು ನಾಗರಿಕರು ಬಲಿಯಾಗಿದ್ದಾರೆ.
ಚುನಾವಣೆ ಸಿದ್ಧತೆ ಅಂಗವಾಗಿ ನಿಯೋಜಿಸಿಸಲಾಗಿದ್ದ ಬಸ್ನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆದಿದೆ ಘಟನೆಯಲ್ಲಿ ಗಾಯಗೊಂಡ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಂತೇವಾಡದಲ್ಲಿ 10 ದಿನಗಳಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.
CISF jawan, among 4 killed, Naxal attack, Dantewada