ಬೆಂಗಳೂರು: ದಿ ವಿಲನ್ ಸಿನಿಮಾ ಕನ್ನಡ ಚಿತ್ರೋದ್ಯಮದ ದಿಕ್ಕು ದೆಸೆ ಬದಲಾಯಿಸುವತ್ತ ಮುಂದಾಗಿದೆ. ಸಿನಿಮಾ ಟಿಕೆಟ್ ದರ ಏರಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ, ಬಿಗ್ ಬಜೆಟ್ ಚಿತ್ರವಾದ ದಿ ವಿಲನ್ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ನಟಿಸಿ, ಪ್ರೇಮ್ ನಿರ್ದೇಶನ ಮಾಡಿದ್ದಾರೆ.
ಪ್ರಪಂಚದಾದ್ಯಂತ ಸುಮಾರು 1 ಸಾವಿರ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಯಿದೆ. ವಿಲ್ಲನ್ ಸಿನಿಮಾವನ್ನು ಥಿಯೇಟರ್ ಗಳ ಬಾಲ್ಕನಿಯಲ್ಲಿ ನೋಡಬೇಕಾದರೇ ನೀವು 200 ರು ಪಾವತಿಸಬೇಕಾಗುತ್ತದೆ, ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ 500 ರು ನೀಡಬೇಕಾಗುತ್ತದೆ,
ಹಿಂದಿ, ತೆಲುಗು ತಮಿಳು ಸಿನಿಮಾಗಳನ್ನು ನೋಡಲು ಪ್ರೇಕ್ಷಕರು 1 ಸಾವಿರ ರು ವರೆಗೆ ನೀಡಲು ಸಿದ್ದರಿರುವುದನ್ನು ನಾನು ನೋಡಿದ್ದೇನೆ, ದುಪ್ಪಟ್ಟು ಹಣ ನೀಡಿ ಆ ಸಿನಿಮಾಗಳನ್ನು ನೋಡುತ್ತೀರಿ ಎಂದಾದರೇ ಕನ್ನಡ ಸಿನಿಮಾ ಏಕೆ ನೋಡಬಾರದು, ನಾವು ನಿರ್ಮಾಪಕರನ್ನು ಗಮನದಲ್ಲಿರಿಸಿಕೊಂಡು ಅತ್ಯಲ್ಪ ಪ್ರಮಾಣದಲ್ಲಿ ಸಿನಿಮಾ ಟಿಕೆಟ್ ದರ ಏರಿಸಿದ್ದೇವೆ, ನಮ್ಮ ಪ್ರೇಕ್ಷಕರು ಇದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ,
ಅಕ್ಟೋಬರ್ 18 ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಅಕ್ಟೋಬರ್ 11 ರಿಂದಲೇ ಪ್ರೀ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದೆ, ಇದೊಂದು ಬೃಹತ ಬಜೆಟ್ ಸಿನಿಮಾವಾಗಿದೆ. ಅದಕ್ಕಾಗಿ ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗಿದೆ ಎಂದು. ಪ್ರೇಕ್ಷಕರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ, ಅವರು ನೀಡಿದ ಹಣಕ್ಕೆ ಪ್ರತಿಯಾಗಿ ಅವರು ಉತ್ತಮ ಸಿನಿಮಾ ನೋಡಿ ಆನಂದಿಸಲಿದ್ದಾರೆ ಎಂದು ನಿರ್ಮಾಪಕ ಸಿ.ಆರ್ ಮನೋಹರ್ ಹೇಳಿದ್ದಾರೆ. .