
ಬೆಂಗಳೂರು: ದಸರಾ ಸಂಭ್ರಮಕ್ಕೆ ಕನ್ನಡ ಚಿತ್ರರಸಿಕರ ಬಹುನಿರೀಕ್ಷೆಯ ಚಿತ್ರ ಹ್ಯಾಟ್ರಿಕ್ ಹೀರೋ ಶಿವಣ್ಣನ “ದಿ ವಿಲನ್” ತೆರೆ ಮೇಲೆ ಬರಲು ಸಿದ್ದವಾಗಿದೆ.ಜೋಗಿ ಪ್ರೇಮ್ ನಿರ್ದೇಶನದ “ದಿ ವಿಲನ್” ವಿಶ್ವದಾದ್ಯಂತ ಏಕಕಾಲಕ್ಕೆ ತೆರೆ ಕಾಣುತ್ತಿದೆ.
ಇಂತಹಾ ದೊಡ್ಡ ಸ್ಟಾರ್ ಬಜೆಟ್ ಚಿತ್ರ ಬಿಡುಗಡೆಯಾಗುವ ದಿನ ಬೇರೆ ಚಿತ್ರಗಳು ಬಿಡುಗಡೆಗೆ ಹಿಂದೇಟು ಹಾಕುವುದು ಸಹಜವಾಗಿದೆ. ಆದರೆ ರಾಗಿಣಿ ದ್ವಿವೇದಿ ಅಭಿನಯದ “ದಿ ಟೆರರಿಸ್ಟ್” ಚಿತ್ರತಂಡ ಮಾತ್ರ ಧೈರ್ಯದಿಂದ ಅದೇ ದಿನ ತಮ್ಮ ಚಿತ್ರವನ್ನೂ ತೆರೆಗೆ ತರಲು ಸಿದ್ದವಾಗಿದೆ.
“ದಿ ಟೆರರಿಸ್ಟ್” ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು / ಎ ಪ್ರಮಾಣಪತ್ರ ನೀಡಿದೆ.
ಸೆನ್ಸಾರ್ ಮಂಡಳಿ ತಮ್ಮ ಚಿತ್ರದ ಯಾವ ದೃಶ್ಯವನ್ನೂ ಕಟ್ ಮಾಡದೆ ಯು / ಎ ಪ್ರಮಾಣಪತ್ರ ನೀಡಿದೆ, ನಮ್ಮ ಚಿತ್ರದ ಹಂಚಿಕೆಯನ್ನು ಜಯಣ್ಣ ನೋಡಿಕೊಲ್ಳಲಿದ್ದಾರೆ. ನಾವು ಇದೇ 18ಕ್ಕೆ ಚಿತ್ರ ಬಿಡುಗಡೆಗೆ ಸಕಲ ಸಿದ್ದತೆ ನಡೆಸಿದ್ದೇವೆ ಎಂದು ಚಿತ್ರ ನಿರ್ದೇಶಕ ಪಿಸಿ ಶೇಖರ್ ಹೇಳಿದ್ದಾರೆ.
ಭಯೋತ್ಪಾದಕ ಕೃತ್ಯಗಳ ನೈಜ ಘಟನೆಯಾಧಾರಿತ ಚಿತ್ರ ಇದಆಗಿದ್ದು ರಾಗಿಣಿ ಇದರಲ್ಲಿ ಮುಸ್ಲಿಂ ಯುವತಿಯ ಪಾತ್ರ ನಿರ್ವಹಿಸಿದ್ದಾರೆ.ಚಿತ್ರಕ್ಕೆ ಎಸ್. ಪ್ರದೀಪ್ ವರ್ಮಾ ಸಂಗೀತ ನೀಡಿದ್ದರೆ ಮುರಳಿ ಕ್ರಿಶ್ ಛಾಯಾಗ್ರಹಣವಿದೆ.