ಬೆಂಗಳೂರು: ಇಡೀ ಜಗತ್ತಿಗೆ ನಾನು ಅಂಬರೀಷ್, ಆದರೆ ಒಮ್ಮೆ ನಾನು ಶೂಟಿಂಗ್ ಸೆಟ್ ಗೆ ಹೋದರೆ ನಾನೊಬ್ಬ ಕಲಾವಿದ ಮಾತ್ರ, ಯಾರೊಬ್ಬ ನಿರ್ದೇಶಕರನ್ನು ನಾನು ಭಯ ಪಡಿಸಲು ಬಯಸುವುದಿಲ್ಲ, ಅವರು ನನ್ನೊಂದಿಗೆ ಸರಾಗವಾಗಿ ಕೆಲಸ ಮಾಡಬೇಕು, ಇದು ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಾತುಗಳು.
ನಿಜ ಹೇಳಬೇಕೆಂದರೇ ತಮ್ಮ ಸ್ನೇಹಿತ ಹಾಗೂ ನಟ ರಜನೀಕಾಂತ್ ಈ ಪಾತ್ರ ಮಾಡಲು ಹೇಳಿದರು, ಹೀಗಾಗಿ ನಾನು ಈ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡೇ. ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸಲು ನನಗೆ ಈ ವಯಸ್ಸಿನಲ್ಲಿ ಸಾಧ್ಯವಾಗುವುದಿಲ್ಲ ಎಂಬ ಹಿಂಜರಿಕೆಯಿಂದ ನಾನು ಆರಂಭದಲ್ಲಿ ಹಿಂದೆ ಸರಿದಿದ್ದೆ. ಆದರೆ ತಮಿಳಿನ ಪಾಪಾಂಡಿ ನೋಡಿದ ನಂತರ ನನ್ನ ಮನಸ್ಸನ್ನು ಸಿದ್ದಪಡಿಸಿದೆ.
ಸಿನಿಮಾ ನೋಡಿದ ನಂತರ ಆ ಪಾತ್ರವನ್ನು ನಾನು ತುಂಬಾ ಪ್ರೀತಿಸಿದೆ.ಹೀಗಾಗಿ ನಟಿಸಲು ಒಪ್ಪಿಕೊಂಡೆ,
ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಗರಡಿಯಲ್ಲಿ ಪಳಗಿದ ಅಂಬರೀಷ್. ಸಿನಿಮಾ ವಿಷಯಕ್ಕೆ ಬಂದಾಗ ಯಾವ ಲೆಜೆಂಡರಿಯು ಮುಖ್ಯ ವಾಗುವುದಿಲ್ಲ, ಸಿನಿಮಾ ಕಥೆ ಮಾತ್ರ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ಸುಮಾರು 220 ಸಿನಿಮಾಗಳಲ್ಲಿ ನಟಿಸರುವ ಅಂಬರೀಷ್ ಕಾದಂಬರಿ ಆಧಾರಿತ ಕೆಲವೇ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅವರಿಗೆ ಸಿಕ್ಕಿದ್ದೆಲ್ಲಾ ಮಾಸ್ ಸಬ್ಜೆಕ್ಟ್ ಗಳು, ಒಂದು ಸಿನಿಮಾದಲ್ಲಿ ನಾನು ವೈದ್ಯನ ಪಾತ್ರ ಮಾಡಿದ್ದೆ, ಅದರಲ್ಲಿ ಸುಮಾರು 5-6 ಫೈಟಿಂಗ್ ಸೀನ್ ಗಳಿದ್ದವು, ಆ ವೇಳೆ ನಾನು ನಿರ್ದೇಶಕರಿಗೆ ಡಾಕ್ಟರ್ ಹೇಗೆ ಫೈಟ್ ಮಾಡಲು ಸಾಧ್ಯ ಎಂದು ಕೇಳಿದ್ದೆ.ಆದರೆ ಚಿತ್ರ ತಂಡ ಅದಕ್ಕಾಗಿ ಡಿಮ್ಯಾಂಡ್ ಮಾಡಲಾಗಿತ್ತು ಎಂದು ಹೇಳಿದ್ದಾರೆ,
ತಮ್ಮ ಏಳು ಸುತ್ತಿನ ಕೋಟೆ, ಹಾಗೂಬ ಮಮತೆಯ ಮಡಿಲು ಸಿನಿಮಾಗಳಲ್ಲಿನ ತಮ್ಮ ಪಾತ್ರ ತಮಗೆ ಜನಪ್ರಿಯತೆ ಹಾಗೂ ಮಹತ್ವ ತಂದು ಕೊಟ್ಟಿತು.
ಜಾಕ್ ಮಂಜು ಮುಂತಾದ ಅನುಭವಿ ತಂತ್ರಜ್ಞರು ಕೆಲಸ ಮಾಡಿದ್ದಾರೆ, ಅರ್ಜುನ್ ಜನವ್ಯ ಸುಹಾಸಿನಿ ಸುದೀಪ್ ಮತ್ತು ಶೃತಿ ಹರಿಹರನ್ ನಟಿಸಿದ್ದಾರೆ. ಗುರುದತ್ತ ಗಾಣಿಗ ಪ್ರಯತ್ನ ಅಪಾರವಾದದ್ದು,ಸ ಆತ ತುಂಬಾ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿ, ನನ್ನನ್ನು ಹ್ಯಾಂಡಲ್ ಮಾಡುವುದು ಸ್ವಲ್ಪ ಕಷ್ಟದ ಕೆಲಸ, ಆದರೆ ಯುವ ನಿರ್ದೇಶಕ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾನೆ, ರೆಬೆಲ್ ಸ್ಟಾರ್ ಸಿನಿಮಾ ಜೀವನಲ್ಲಿ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಒಂದು ಮೈಲಿಗಲ್ಲಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.