ಇಳಿ ವಯಸ್ಸಿನಲ್ಲೂ ಯಂಗ್ ರೆಬೆಲ್: ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ಸೆ.27ಕ್ಕೆ ತೆರೆಗೆ!

ಸ್ಯಾಂಡಲ್ವುಡ್ ನ ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಇದೇ ಸೆಪ್ಟೆಂಬರ್ 27ಕ್ಕೆ ರಾಜ್ಯಾದ್ಯಂತ ಅದ್ಧೂರಿ ತೆರೆ ಕಾಣಲಿದೆ.
ಇಳಿ ವಯಸ್ಸಿನಲ್ಲೂ ರೆಬೆಲ್ ಸ್ಟಾರ್ ಅಂಬರೀಶ್ ಅವರು ಸಖತ್ ಆಗಿ ಡ್ಯಾನ್ಸ್ ಮತ್ತು ಫೈಟ್ ಮಾಡಿದ್ದಾರೆ. ಹಲವು ವರ್ಷಗಳ ಬಳಿಕ ಅಂಬರೀಶ್ ನಾಯಕನಟನಾಗಿ ಕಮ್ ಬ್ಯಾಕ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಕ್ರಿಯೆಷನ್ ಅಡಿಯಲ್ಲಿ ಜಾಕ್ ಮಂಜು ಚಿತ್ರವನ್ನು ನಿರ್ಮಿಸಿದ್ದು ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ್, ಶ್ರುತಿ ಹರಿಹರನ್, ಯಂಗ್ ಸುಹಾಸಿನಿ ಅವರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯೂ ಸರ್ಟಿಫಿಕೇಟ್ ನೀಡಿದ್ದು ಈ ಹಿನ್ನೆಲೆಯಲ್ಲಿ ಚಿತ್ರ ತಂಡ ಇದೇ ಸೆಪ್ಟೆಂಬರ್ 27ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ರೆಡಿಯಾಗಿದೆ.
ಸೆಪ್ಟೆಂಬರ್ 16ಕ್ಕೆ ಅದ್ಧೂರಿ ಆಡಿಯೋ ಲಾಂಚ್
ಚಿತ್ರ ಬಿಡುಗಡೆಗೂ ಮುನ್ನ ಸೆಪ್ಟೆಂಬರ್ 16ರಂದು ಅದ್ಧೂರಿಯಾಗಿ ಆಡಿಯೋ ಲಾಂಚ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅದರಂತೆ ಆಡಿಯೋ ಲಾಂಚ್ ಗೆ ಚಿತ್ರತಂಡ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ