ಕನ್ನಡ ಬಿಗ್ ಬಾಸ್ ಸೀಸನ್-6 ಅಕ್ಟೋಬರ್ 21ರಿಂದ ಆರಂಭ

ಬೆಂಗಳೂರು: ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ 6ನೇ ಆವೃತ್ತಿ ಅಕ್ಟೋಬರ್ 21ರಂದು ಆರಂಭವಾಗಲಿದೆ.ಬಿಗ್ ಬಾಸ್ ಹೊಸ ಸೀಸನ್ ಗೆ ಕಿಚ್ಚಿನಿಂದ ಕಿಚ್ಚ ತಯಾರಿಯಾಗಿದ್ದಾರೆ ಎಂದು ಖಾಸಗಿ ವಾಹಿನಿ ಪ್ರಕಟಿಸಿದೆ. ಈಗಾಗಲೇ ಕನ್ನಡದಲ್ಲಿ 5 ಆವೃತ್ತಿಗಳನ್ನು ಪೂರೈಸಿರುವ ಬಿಗ್ ಬಾಸ್ ಅನೇಕ ಹಿರಿ-ಕಿರಿತೆರೆ ಕಲಾವಿದರಿಗೆ ವೇದಿಕೆಯಾಗಿತ್ತು. ಈ ರಿಯಾಲಿಟಿ ಶೋ ಮೂಲಕವೇ ಹಲವು ಕಲಾವಿದರು ಇನ್ನಷ್ಟು ಜನಪ್ರಿಯತೆ ಗಳಿಸಿದ್ದರು.ಕಳೆದ ಸೀಸನ್ ನಲ್ಲಿ ಸಾಮಾನ್ಯ ವ್ಯಕ್ತಿಗಳಿಗೆ ಸಹ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಕಲ್ಪಿಸಿ ಸುದ್ದಿಯಾಗಿತ್ತು. ಈ ಸೀಸನ್ ನಲ್ಲಿ ಕೂಡ ಸಾಮಾನ್ಯ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ