ಮುಂಬೈ: ಭಾರತೀಯ ರೂಪಾಯಿ ಕುಸಿತವನ್ನು ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಾಟ್ ಮಾರ್ಕೆಟ್(ಈಗಲೇ ಒಪ್ಪಂದ ಮಾಡಿಕೊಂಡು ಈಗಲೇ ವಹಿವಾಟು ನಡೆಸುವುದು) ಮತ್ತು ಫಾರ್ವರ್ಡ್ ಮಾರ್ಕೆಟ್( ಈಗ ಒಪ್ಪಂದ ಮಾಡಿಕೊಂಡು ಮುಂದೆ ಮಾರಾಟ ಮಾಡುವುದು) ನಲ್ಲಿ ಮಧ್ಯೆ ಪ್ರವೇಶಿಸಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಕೊರಾಪ್ ವರದಿ ತಿಳಿಸಿದೆ.ಸ್ಪಾಟ್ ಮತ್ತು ಫಾರ್ವರ್ಡ್ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಗಳನ್ನು ನೀಡಿರುವ ದರದಲ್ಲಿ ಮಾರಾಟ ಮಾಡುವುದು ಅಥವಾ ಖರೀದಿಸುವುದಾಗಿದೆ.ವರದಿಯ ಪ್ರಕಾರ, ಜೂನ್ 2008ರಿಂದ ಮೇ 2009ರವರೆಗೆ ಭಾರತೀಯ ರೂಪಾಯಿ ಬೆಲೆ ಶೇಕಡಾ 13ರಷ್ಟು ಇಳಿಕೆಯಾದಾಗ, ಆಗ ವಿದೇಶಿ ವಿನಿಮಯ ಮೀಸಲು 312 ಶತಕೋಟಿ ಡಾಲರ್ ನಷ್ಟು ಇದ್ದರೂ ಕೂಡ ಆರ್ ಬಿಐ 43 ಶತಕೋಟಿ ಡಾಲರ್ ಗೆ ಮಾರಾಟ ಮಾಡಿತ್ತು.1990ರ ದಶಕದಲ್ಲಿ ಕೂಡ ಒಟ್ಟು ವಿದೇಶಿ ವಿನಿಮಯ ಮೀಸಲು 40 ಶತಕೋಟಿ ಡಾಲರ್ ಗಿಂತ ಕಡಿಮೆಯಾಗಿದ್ದಾಗ ವಿದೇಶಿ ವಿನಿಮಯ ಮಾರುಕಟ್ಟೆಗೆ ಆರ್ ಬಿಐ ಮಧ್ಯ ಪ್ರವೇಶಿಸಿ ರೂಪಾಯಿ ಕುಸಿತವನ್ನು ತಡೆಗಟ್ಟಲು ಒಟ್ಟು ವಿದೇಶಿ ವಿನಿಮಯವನ್ನು ಶೇಕಡಾ 8ರಿಂದ 9ರಷ್ಟು ಮಾರಾಟ ಮಾಡಿತ್ತು.ನಾವು ಪ್ರಸ್ತುತ ಇರುವ ಮಾರುಕಟ್ಟೆ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಆರ್ ಬಿಐ ಶೇಕಡಾ 10ರಷ್ಟು ಹೋಗಬಹುದಾದ ಸಾಧ್ಯತೆಯಿದ್ದು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚುವರಿ 25 ಶತಕೋಟಿ ಡಾಲರ್ ನ್ನು ಮಾರಾಟ ಮಾಡಬಹುದಾಗಿದೆ ಎಂದು ಎಸ್ ಬಿಐ ವರದಿ ತಿಳಿಸಿದೆ.ಡಾಲರ್ ಎದುರು ರೂಪಾಯಿ ಬೆಲೆ ಸ್ಥಿರವಾಗಿ ಉಳಿಯಲು ಆರ್ ಬಿಐ ಮಧ್ಯವರ್ತಿಗಳ ಮೂಲಕ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ.
Seen By: 225 ಮುಂಬೈ: ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಬ್ಯಾಂಕುಗಳು ವಿಧಿಸುವ ಶುಲ್ಕ ಇಂದಿನಿಂದ ಅಗ್ಗ ವಾಗಲಿದೆ. ರಿಯಲ್-ಟೈಮ್ ಗ್ರೋಸ್ ಸೆಟಲ್ಮೆಂಟ್(ಆರ್ಟಿಜಿಎಸ್) ಹಾಗೂ ನ್ಯಾಷನಲ್ [more]
Seen By: 275 ಅಮರಾವತಿ: ಸಿಬಿಐ ಮತ್ತು ಆರ್ಬಿಐನಂಥ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅನಕೊಂಡದ ರೀತಿಯಲ್ಲಿ ನುಂಗಿ ಹಾಕುತ್ತಿದ್ದಾರೆ ಎಂದು ಆಂಧ್ರದ ಹಣಕಾಸು ಸಚಿವ [more]