ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ವತಿಯಿಂದ ಬೆಂಗಳೂರಿನಲ್ಲಿ ಐಪಿ500 ಪ್ರೋಟೋಕಾಲ್ ಸಮ್ಮೇಳನ ಆಯೋಜನೆ

ಬೆಂಗಳೂರು, 6 ಸೆಪ್ಟೆಂಬರ್ 2018 :  ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ (ಐಸಿಸಿ) ಹಾಗೂ ಐಪಿ500 ಅಲಯನ್ಸ್ ಜಂಟಿಯಾಗಿ ಬೆಂಗಳೂರಿನಲ್ಲಿ “ಐಪಿ500 ಪ್ರೋಟೋಕಾಲ್” ಸಮ್ಮೇಳನ ಹಮ್ಮಿಕೊಂಡಿತ್ತು.  ಇದು ಐಒಟಿ(IoT) ಆಧಾರಿತ ಕಟ್ಟಡ ಯಾಂತ್ರೀಕೃತ(ಬಿಲ್ಡಿಂಗ್ ಆಟೋಮೇಷನ್) ನಿರ್ವಹಣೆ ಹಾಗೂ ಸ್ಮಾರ್ಟ್ ಸಿಟಿ ಅಪ್ಲಿಕೇಷನ್‍ಗಳ ನಿರ್ಮಾಣಕ್ಕೆ ಐಪಿ 500 ವಿಧಾನ ಬಳಕೆಯ ಕುರಿತು ಗ್ರಾಹಕರಿಗೆ ಮಾಹಿತಿ ನೀಡುವುದು ಈ ಸಮ್ಮೇಳನದ ಉದ್ದೇಶವಾಗಿತ್ತು.

ಸಮ್ಮೇಳನವನ್ನು ಐಸಿಸಿ ಪ್ರಧಾನ ನಿರ್ದೇಶಕ ಡಾ.ರಾಜೀವ್ ಸಿಂಗ್ ಉದ್ಘಾಟಿಸಿದರು. ಐಪಿ500 ಅಲಯನ್ಸ್‍ನ ಅಧ್ಯಕ್ಷ ಹೆಳ್ಮಟ್ ಅಡಮ್‍ಸ್ಕಿ ಸ್ವಾಗತ ಭಾಷಣ ಮಾಡಿದರು. ಸಮ್ಮೇಳನದಲ್ಲಿ ಉದ್ಯಮದ ಪ್ರಮುಖ ಸಂಸ್ಥೆಗಳಾದ ಇಂಡಿಯನ್ ಸ್ಮಾರ್ಟ್ ಸಿಟಿ ಮಿಷನ್, ಹನಿವೆಲ್, ಮೈಕ್ರೋಸೆನ್ಸ್, ವಿಪ್ರೋ, ಬೋಷ್, ಬಜಾಜ್ ಎಲೆಕ್ಟ್ರೋನಿಕ್ಸ್ ಲಿ. ಮತ್ತಿತ್ತರ ಸಂಸ್ಥೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಸರ್ಕಾರಿ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಒಇಎಮ್‍ಗಳು ಕೂಡ ಈ ಒಂದು ದಿನದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಮ್ಮೇಳನದಲ್ಲಿ ಐಸಿಸಿ ಪ್ರಧಾನ ನಿರ್ದೇಶಕ ಡಾ.ರಾಜೀವ್ ಸಿಂಗ್ ಪರವಾಗಿ ತಪನ್ ಚಟ್ಟೋಪಾಧ್ಯಾಯ್ ಮಾತನಾಡಿ, “ಕಳೆದ ಕೆಲ ವರ್ಷಗಳಲ್ಲಿ ಕಟ್ಟಡ ಯಾಂತ್ರೀಕೃತ ನಿರ್ಮಾಣ ಹಾಗೂ ಮಾರುಕಟ್ಟೆ ನಿಯಂತ್ರಣ ಗಣನೀಯ ಮಟ್ಟದಲ್ಲಿ ಹೆಚ್ಚಳವಾಗಿದೆ.  ಸರ್ಕಾರವೇ ಈಗ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಆರಂಭಿಸಿರುವುದರಿಂದ, ಯುವ ಪೀಳಿಗೆ ತಂತ್ರಜ್ಞಾನದ ಆವಿಷ್ಕಾರದ ಹೊಸ ಅಲೆಯನ್ನು ಇಷ್ಟಪಡುತ್ತಿದ್ದಾರೆ. ವಿಶ್ವದ ಅತಿ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮದಾಗಿದ್ದು, ಈ ನಿಟ್ಟಿನಲ್ಲಿ ಒಂದು ಸುಧಾರಿತ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ.  ಐಪಿ500 ತಂತ್ರಜ್ಞಾನ ಒಂದು ವೈರ್‍ಲೆಸ್ ಸಂಪರ್ಕ ವೇದಿಕಯಾಗಿದ್ದು, ಸ್ಮಾರ್ಟ್ ಕಟ್ಟಡಗಳೂ, ವಾಣಿಜ್ಯ ಸ್ಥಳಗಳು ಹಾಗೂ ಸ್ಮಾರ್ಟ್ ನಗರಗಳ ಸೇವೆ ಹಾಗೂ ನಿರ್ವಹಣೆಯನ್ನು ಸರಳಗೊಳಿಸುತ್ತದೆ” ಎಂದರು.

“ಪ್ರಸ್ತುತ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಅವಕಾಶಗಳು ಹೇರಳವಾಗಿವೆ. ನಾವು ಐಸಿಸಿಯೊಂದಿಗೆ ಕೈಜೋಡಿಸಿದ್ದು, ಈ ಸಮ್ಮೇಳನದಲ್ಲಿ ಐಪಿ500 ತಂತ್ರಜ್ಞಾನದ ಉಪಯೋಗದ ಕುರಿತು ಬೆಳಕು ಚೆಲ್ಲಲು ಬಯಸುತ್ತೇವೆ. ವಿವಿಧ ವಲಯಗಳಲ್ಲಿ ಈ ತಂತ್ರಜ್ಞಾನಕ್ಕಿರುವ ಬೇಡಿಕೆ ಹಿನ್ನೆಲೆಯಲ್ಲಿ ನಾವು ಜಗತ್ತಿನ ಇತರ ಹೈ-ಟೆಕ್ ನಗರಗಳಲ್ಲಿ ಕೂಡ ಈ ತಂತ್ರಜ್ಞಾನವನ್ನು ಪರಿಚಯಿಸುವ ಗುರಿ ಹೊಂದಿದ್ದೇವೆ. ಸ್ಮಾರ್ಟ್ ಸಿಟಿ, ವಾಣಿಜ್ಯ ಕಟ್ಟಡಗಳು, ಭಾರತೀಯ ರೈಲು ಸೇವೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ನಾವು ಪ್ರಮುಖ ಸಂಸ್ಥೆಗಳ ಜೊತೆಗೆ ಕೈಜೋಡಿಸಲು ಚಿಂತನೆ ನಡೆಸುತ್ತಿದ್ದೇವೆ ” ಎಂದು ಐಪಿ500 ಪ್ರೋಟೋಕಾಲ್‍ನ ಅಧ್ಯಕ್ಞ ಹೆಳ್ಮಟ್ ಅಡಮ್‍ಸ್ಕಿ ಹೇಳಿದರು.

“ಇದರ ಆರಂಭಕ್ಕಾಗಿ ಭಾರತದ ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರು ಅತ್ಯಂತ ಸೂಕ್ತ ಸ್ಥಳವಾಗಿದೆ. ಇದು ಬಿಲ್ಡಿಂಗ್ ಆಟೋಮೇಷನ್ ಮಾರುಕಟ್ಟೆಯಲ್ಲಿ ಹಲವು ಬೃಹತ್ ಉದ್ಯಮಿಗಳನ್ನು ಹೊಂದಿದ ನಗರವಾಗಿದೆ” ಎಂದರು.

ಐಪಿ500 ಭಾರತೀಯ ಶಾಖೆಯ ಅಧ್ಯಕ್ಷ ಗುಲ್ಷನ್ ಅಘಿ ಮಾತನಾಡಿ, “ಭಾರತೀಯ ಮಾರುಕಟ್ಟೆಗೆ ಐಪಿ500 ಅಲಯನ್ಸ್     “ಸಾಕಷ್ಟು ಬದ್ಧತೆ ಹೊಂದಿದ್ದು, ಉತ್ಪಾದಕರು, ಸಂಯೋಜಕರು ಹಾಗೂ ಗ್ರಾಹಕರಿಗೆ ಸುಸ್ಥಿರ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದು ಎಲ್ಲ ಷೇರುದಾರರಿಗೆ ಸುಲಭ ಹಾಗು ಸರಳವಾಗಿ ವೈರ್‍ಲೆಸ್ ವೇದಿಕೆ ಮೂಲಕ ಉತ್ಪನ್ನಗಳನ್ನು ಪಡೆಯಲು ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದರು”

ಭಾರತೀಯ ಬಿಲ್ಡಿಂಗ್ ಅಟೋಮೇಷನ್ ಮಾರುಕಟ್ಟೆಯ ಸಿಎಜಿಆರ್ 2023ರ ವೇಳೆಗೆ  ಶೇ.12.5ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಐಒಟಿ(IoT) ಹಾಗೂ ಸೆನ್ಸಾರ್ ನೆರವಿನ ಸ್ಮಾರ್ಟ್ ಮಾಹಿತಿಯನ್ನು ಆಧರಿಸಿ ನಗರಗಳನ್ನು ಪರಿವರ್ತಿಸುತ್ತಿವೆ. ಭಾರತ ಈಗಾಗಲೇ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮತ್ತೊಂದು ಹೆಜ್ಜೆಗೆ ಸಿದ್ಧವಾಗಿದೆ.

ಐಸಿಸಿ ಕುರಿತು

ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ (ಐಸಿಸಿ) 1925ರಲ್ಲಿ ಸ್ಥಾಪನೆಯಾಯಿತು. ಇದರ ಕೇಂದ್ರ ಕಚೇರಿ ಕೋಲ್ಕತ್ತಾದಲ್ಲಿದ್ದು, ದೇಶದಲ್ಲಿನ ಏಕೈಕ ರಾಷ್ಟ್ರೀಯ ವಾಣಿಜ್ಯ ಕೇಂದ್ರವಾಗಿದ್ದು, ಸಕ್ರಿಯ ಹಾಗೂ ಭರವಸೆ ಮೂಡಿಸಿರುವ ಕೇಂದ್ರವಾಗಿದೆ. ಭಾರತದ ಕೆಲ ಪ್ರಮುಖ ಹಾಗೂ ಬೃಹತ್ ಕೈಗಾರಿಕಾ ಗುಂಪುಗಳು ಇದರ ಸದಸ್ಯತ್ವ ಪಡೆದಿವೆ. ಭವಿಷ್ಯದ ಅಗತ್ಯಗಳನ್ನು ಪರಾಮರ್ಶಿಸುವುದು, ಸವಾಲುಗಳನ್ನು ಎದುರಿಸುವುದು,  ಬದಲಾವಣೆಗಳು ಹಾಗೂ ಅವಕಾಶಗಳಿಗೆ ಷೇರುದಾರರನ್ನು ತಯಾರುಗೊಳಿಸುವುದು, ಐಸಿಸಿಯ ಸಾಮಥ್ರ್ಯಗಳಲ್ಲಿ ಒಂದಾಗಿದೆ.

ಐಪಿ 500 ಕುರಿತು

ಐಪಿ 500 ಒಂದು ತೆರೆದ, ಸುಭದ್ರ ಹಾಗೂ ಮಧ್ಯವರ್ತಿಗಳಿಲ್ಲದ ವೈರ್‍ಲೆಸ್ ವೇದಿಕೆಯಾಗಿದೆ. ಇದನ್ನು 2007ರಲ್ಲಿ ಜರ್ಮನಿಯಲ್ಲಿ ಆರಂಭಿಸಲಾಯಿತು. ಪ್ರಮುಖ ಒಇಎಂ ಗಳಾದ ಬೋಷ್, ಹನಿವೆಲ್, ಸೀಮೆನ್ಸ್, ಸ್ಕಿಂಡ್ಲರ್, ಓಮ್ರೋನ್, ಡೋರ್ಮಾ ಮತ್ತಿತರರ ಕೈಗಾರಿಕ ಹಾಗೂ ವಾಣಿಜ್ಯ ಸಂಸ್ಥೆಗಳು ಒಟ್ಟಾಗಿ ಇದನ್ನು ಆರಂಭಿಸಿದವು. ಐಪಿ500 ಸಂವಹನ ವೇದಿಕೆಗೆ ಹೊಸ ರೂಪ ನೀಡುವುದು ಐಪಿ 500 ಅಲಯನ್ಸ್‍ನ ಪ್ರಮುಖ ಉದ್ದೇಶವಾಗಿದೆ. ಬೃಹತ್ ಕಟ್ಟಡಗಳಿಗೆ ಸುರಕ್ಷಿತ ಮಾಹಿತಿಗಳ ರವಾನೆ ಹಾಗೂ ಅವುಗಳನ್ನು “ಟರ್ನ್ ಕೀ ಮಾದರಿ”ಯನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.

ಐಪಿ 500 ಅಲಯನ್ಸ್ 2018ರ ಫೆಬ್ರವರಿಯಲ್ಲಿ ಭಾರತೀಯ ಶಾಖೆಯನ್ನು ಘೋಷಿಸಿದೆ. ಇದು ಓಇಎಮ್‍ಗಳ ಹಾಗೂ ಗ್ರಾಹಕರ ಲಾಭದ ಕುರಿತು ಹೆಚ್ಚಿನ ಅರಿವು ಮೂಡಿಸಿದ್ದು, ಸದ್ಯ ಭಾರತದಲ್ಲಿ ಭಾರಿ ಬೇಡಿಕೆಯಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ