ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದ ಸರ್ಕಾರ !
September 5, 2018VDಕ್ರೀಡೆComments Off on ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದ ಸರ್ಕಾರ !
Seen By: 317
ನವದೆಹಲಿ : ಜಕಾರ್ತ್ ನಲ್ಲಿ ಇತ್ತೀಚಿಗೆ ನಡೆದ ಏಷ್ಯನ್ ಗೇಮ್ಸ್ – 2018 ರ 18 ನೇ ಆವೃತ್ತಿಯಲ್ಲಿ ಪದಕ ವಿಜೇತರಿಗೆ ಕೇಂದ್ರ ಸರ್ಕಾರದ ವತಿಯಿಂದ ಇಂದು ನಗದು ಬಹುಮಾನ ಮಾಡಿ ಸನ್ಮಾನಿಸಲಾಯಿತು.ಚಿನ್ನದ ಪದಕ ವಿಜೇತರಿಗೆ 40 ಲಕ್ಷ ರೂ. ಬೆಳ್ಳಿ ಹಾಗೂ ಕಂಚು ಪದಕ ವಿಜೇತರಿಗೆ ಕ್ರಮವಾಗಿ 20, ಹಾಗೂ 10 ಲಕ್ಷ ರೂ. ಬಹುಮಾನ ನೀಡಲಾಯಿತು.ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಭಾರತ 15 ಚಿನ್ನ, 24 ಬೆಳ್ಳಿ, ಹಾಗೂ 30 ಕಂಚಿನ ಪದಕ ಭೇಟಿಯಾಡುವ ಮೂಲಕ ಪದಕಗಳ ಪಟ್ಟಿ ರಾಷ್ಟ್ರಗಳ ಪೈಕಿ 8 ನೇ ಸ್ಥಾನದಲ್ಲಿದೆ.ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ನಾರಿಂದರ್ ಬಾರ್ತಾ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಎಲ್ಲಾ ಪದಕ ವಿಜೇತರನ್ನು ಅಭಿನಂದಿಸಿದ ರಾಜನಾಥ್ ಸಿಂಗ್, ಕ್ರೀಡಾಕ್ಷೇತ್ರದಲ್ಲಿ ಭಾರತ ಜಗತ್ತಿನಲ್ಲಿಯೇ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮುವ ಕಾಲ ದೂರವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಭಾರತದ ಆಥ್ಲೀಟ್ ಗಳ ಪ್ರದರ್ಶನ ನೋಡಿ ನಾನೇ ಬೆರಗಾಗಿದ್ದೇನೆ. ಭಾರತ ಆರ್ಥಿಕವಾಗಿ ಮಾತ್ರವಲ್ಲ, ಕ್ರೀಡೆಯಲ್ಲೂ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದರು. ಅಲ್ಲದೇ, ದೇಶದಲ್ಲಿ ಕ್ರೀಡೆ ಅಭಿವೃದ್ದಿಯಲ್ಲಿ ಸಚಿವ ರಾಥೋರ್ ಅವರ ಬದ್ದತೆಯನ್ನು ರಾಜನಾಥ್ ಸಿಂಗ್ ಶ್ಲಾಘಿಸಿದರು.ಕ್ರೀಡೆ ಬಗ್ಗೆಗಿನ ರಾಥೋರ್ ಅವರ ಬದ್ದತೆಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರ ಬದ್ದತೆಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡಬೇಕು ಎಂದು ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
August 20, 2018VDಕ್ರೀಡೆComments Off on ಏಷ್ಯನ್ ಗೇಮ್ಸ್ ಕ್ರೀಡಾಕೂಟ: 2ನೇ ದಿನದ ಆರಂಭದಲ್ಲೇ ಭಾರತಕ್ಕೆ ಮತ್ತೊಂದು ಪದಕ
Seen By: 240 ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆಯನ್ನು ಮುಂದುವರೆದಿದ್ದು, 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಶೂಟಿಂಗ್ ನಲ್ಲಿ [more]