100 ಮೀಟರ್ ಓಟದಲ್ಲಿ ಡುಟೀ ಚಾಂದ್ ಗೆ ಬೆಳ್ಳಿ ಪದಕ

ಏಷ್ಯನ್ ಗೇಮ್ಸ್ ನ ಮಹಿಳಾ ವಿಭಾಗದ 100 ಮೀಟರ್ ಓಟದಲ್ಲಿ ಎರಡನೇ ಸ್ಥಾನ ಪಡೆದಿರುವ ಡುಟೀ ಚಾಂದ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಏಷ್ಯನ್ ಗೇಮ್ಸ್ ನಲ್ಲಿ ಎರಡಕ್ಕಿಂತ ಹೆಚ್ಚು ಪದಕ ಗೆದ್ದಿರುವ ಭಾರತೀಯ ಅಥ್ಲೀಟ್  ಗಳ ಪಟ್ಟಿಗೆ ಈಗ ಡುಟೀ ಚಾಂದ್ ಕೂಡಾ ಸೇರ್ಪಡೆಯಾಗಿದ್ದಾರೆ. ಡುಟೀ ಚಾಂದ್ 23.20 ಸೆಕೆಂಡ್ಸ್ ನಲ್ಲಿ ನಿಗದಿತ ಗುರಿಯನ್ನು ಮುಟ್ಟುವ ಮೂಲಕ ಎರಡನೇ ಸ್ಥಾನ ಗಳಿಸಿದ್ದರೆ 22.96 ಸೆಕೆಂಡ್ ಗಳಲ್ಲಿ ನಿಗದಿತ ಗುರಿಯನ್ನು ತಲುಪಿದ ಬಹ್ರೇನ್ನ ಎಡಿಡಿಯೋಂಗ್ ಓಡಿಯಾಂಗ್ ಚಿನ್ನದ ಪದಕ ಗೆದ್ದಿದ್ದಾರೆ, ಕಂಚಿನ ಪದಕ ಚೀನಾದ ವೈ ಯೊಂಗ್ಲಿ ಪಾಲಾಗಿದೆ.
ಹೈಪರ್ ಆಂಡ್ರೊಜೆನಿಜಮ್ ಅಂಶ ಜಾಸ್ತಿಯಾಗಿದ್ದ ಕಾರಣ ಒಡಿಶಾದ 22 ವರ್ಷದ ಅಥ್ಲೀಟ್ ಡುಟೀ ಚಾಂದ್ ಗೆ 2014 ರ ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರಲಿಲ್ಲ. ನಂತರ ಕೋರ್ಟ್ ನಲ್ಲಿ ಕಾನೂನು ಸಮರ ಎದುರಿಸಿದ್ದ ಡುಟಿ ಚಾಂದ್ ಐಎಎಎಫ್ ನ ನಿಯಮಗಳನ್ನು ಪ್ರಶ್ನಿಸಿದ್ದರು.  ಕಾನೂನು ಸಮರದ ನಂತರ ಪರಿಷ್ಕರಣೆಗೊಂಡ ನಿಯಮಗಳಿಗೆ ಅನುಗುಣವಾಗಿ ಡುಟೀ ಚಾಂದ್ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಾಧ್ಯವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ