ಏಷ್ಯನ್ ಗೇಮ್ಸ್ 2018: ಸೋಲಿನಲ್ಲೂ ದಾಖಲೆ ಬರೆದ ಪಿವಿ ಸಿಂಧು!

ಜಕಾರ್ತ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿಸಿ ಸಿಂಧು ಅವರು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ನಿರಾಸೆ ಮೂಡಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಅವರು ಚೀನಾದ ಥೈಪೆಯ ತೈ ಝ ಯಿಂಗ್ ವಿರುದ್ಧ 13-21, 16-21ರ ನೇರ ಸೆಟ್ ಗಳಿಂದ ಸೋಲು ಕಂಡಿದ್ದಾರೆ.
ಇನ್ನು ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ನಲ್ಲಿ ಫೈನಲ್ ತಲುಪುವ ಮೂಲಕ ದಾಖಲೆ ಬರೆದಿದ್ದರು. ಆದರೆ ಚಿನ್ನ ಗೆದ್ದು ವಿಶ್ವ ದಾಖಲೆ ಬರೆಯದೆ ನಿರಾಸೆ ಮೂಡಿಸಿದ್ದಾರೆ.
ಪಿವಿ ಸಿಂಧು ಅವರು ಇದೇ ವರ್ಷದಲ್ಲಿ ಪ್ರಮುಖ ಮೂರು ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ್ದು ಚಿನ್ನದ ಪದಕ ಗೆಲ್ಲದೆ ನಿರಾಸೆ ಮೂಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ