ನವದೆಹಲಿ: 2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಹಲವು ಭಾರತೀಯ ಕ್ರೀಡಾಪಟುಗಳು ಪದಕ ಗೆಲ್ಲುವ ಮೂಲಕ ಭಾರತ ಕೀರ್ತಿ ಪತಾಕೆಯನ್ನು ವಿದೇಶಗಳಲ್ಲಿ ಹಾರಿಸುತ್ತಿದ್ದಾರೆ.
ಇನ್ನು ಗ್ರಾಮೀಣ ಯುವ ಸಮೂಹದಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸಹಾಯ ಮಾಡಲು ಟೀಂ ಇಂಡಿಯಾ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಮುಂದಾಗಿದ್ದು ಅದರಂತೆ ಹೆಪ್ಟಾಥ್ಲಾನ್ ನಲ್ಲಿ ಸ್ವಪ್ನಾ ಬರ್ಮನ್ ಚಿನ್ನ ಗೆದ್ದ ಸಾಧನೆ ಹಿಂದಿದ್ದಾರೆ ದ್ರಾವಿಡ್.
ಗೋ ಸ್ಪೋರ್ಟ್ಸ್ ಮತ್ತು ದ್ರಾವಿಡ್ ಅಥ್ಲೀಟ್ ಮೆಂಟರ್ ಶಿಪ್ ಪ್ರೋಗ್ರಾಮ್ ಮೂಲಕ ರಾಹುಲ್ ದ್ರಾವಿಡ್ ಆರ್ಥಿಕ ಸಹಾಯ ನೀಡುತ್ತಿದ್ದಾರೆ.
ಏಷ್ಯನ್ ಗೇಮ್ಸ್ ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ದಾಖಲೆಯನ್ನು ಸ್ವಪ್ನಾ ಬರ್ಮನ್ ಬರೆದಿದ್ದಾರೆ.
ಚಿನ್ನದ ಪದಕ ಗೆದ್ದ ಸ್ವಪ್ನಾ ಬರ್ಮನ್ ಅವರಿಗೆ ಪಶ್ಚಿಮ ಬಂಗಾಳ ಸರ್ಕಾರ 10 ಲಕ್ಷ ರುಪಾಯಿ ಬಹುಮಾನ ಹಾಗೂ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದೆ.