ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್: ರಜತ ಪದಕಕ್ಕೆ ತೃಪ್ತಿ ಪಟ್ಟ ಪಿ ವಿ ಸಿಂಧು

ಜಕಾರ್ತ್: ಏಷ್ಯನ್ ಗೇಮ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನ ಫೈನಲ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧು ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ದ 13-21, 16-21 ಸೆಟ್ ಗಳ ಅಂತರದಿಂದ ಸೋತು ರಜತ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಆದರೆ, ಈ ಸಾಧನೆಯ ಮೂಲಕ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೊದಲ ಬಾರಿಗೆ ದೇಶಕ್ಕೆ ಬೆಳ್ಳಿ ತಂದ ಹೆಗ್ಗಳಿಕೆಗೆ ಸಿಂಧು ಭಾಜನರಾಗಿದ್ದಾರೆ.

ಕಳೆದ ಒಲಿಂಪಿಕ್ಸ್ ನ ವನಿತಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗೆದ್ದಿದ್ದ ಪಿ.ವಿ.ಸಿಂಧು, ಏಶ್ಯನ್ ಗೇಮ್ಸ್ ನಲ್ಲಿ ಬಂಗಾರದ ಪದಕ ಗೆಲ್ಲಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಹಲವು ಕ್ರೀಡಾಭಿಮಾನಿಗಳಿಗೆ ಇದರಿಂದ ನಿರಾಸೆಯಾಗಿದೆ.

ವಿಶ್ವ ವನಿತಾ ಬ್ಯಾಡ್ಮಿಂಟನ್ ನ ಅಗ್ರ ಶ್ರೇಯಾಂಕ ಮತ್ತು ಮೂರನೇ ಶ್ರೇಯಾಂಕಿತೆಯ ನಡುವಿನ ಫೈನಲ್ ಸೆಣಸಾಟದಲ್ಲಿ ಅಗ್ರ ಶ್ರೇಯಾಂಕಿತೆ ತೈ ಜು ಯಿಂಗ್ ಜಯ ಗಳಿಸುವಲ್ಲಿ ಸಫಲರಾದರು. ಈ ಮೂಲಕ ಸಿಂಧು ಪ್ರಮುಖ ಕೂಟಗಳ ಫೈನಲ್ ಗಳ ಸೋಲಿನ ಸರಣಿ ಮತ್ತೆ ಮುಂದುವರಿಯಿತು. ಸಿಂಧು ಜು ಯಿಂಗ್ ವಿರುದ್ದ ರಿಯೋ ಒಲಿಂಪಿಕ್ ಸೇರಿದಂತೆ ಕಳೆದ ಐದು ಫೈನಲ್ ಗಳಲ್ಲಿ ಸೋತಿದ್ದರು.

ಸೋಮವಾರ ನಡೆದ ಸೆಮಿ ಫೈನಲ್ ನಲ್ಲಿ ಸಿಂದು ಜಪಾನಿನ ಅಕಾನೆ ಯೆಮಾಗುಚಿ ವಿರುದ್ದ21-17, 15-21, 21-10 ಅಂಕಗಳ ಅಂತರದಿಂದ ಗೆದ್ದು ಅಂತಿಮ ಘಟ್ಟಕ್ಕೆ ತಲುಪುವಲ್ಲಿ ಸಫಲರಾಗಿದ್ದರು. ಮತ್ತೊಂದು ಸೆಮಿ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತೆ ತೈ ಜು ಯಿಂಗ್ ಭಾರತದ ಸೈನಾ ನೆಹ್ವಾಲ್ ವಿರುದ್ದ 17-21, 14-21 ಅಂತರದಿಂದ ಗೆಲುವು ಸಾಧಿಸಿದ್ದರು.

ಇನ್ನು ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ನಲ್ಲಿ ಫೈನಲ್ ತಲುಪುವ ಮೂಲಕ ದಾಖಲೆ ಬರೆದಿದ್ದ ಸಿಂಧು, ಚಿನ್ನ ಗೆಲ್ಲಲು ಸಾಧ್ಯವಾಗದಿರುವುದು ವಿಶ್ವ ದಾಖಲೆ ಸಿಂಧು ಪಯತ್ನ ನಿರಾಸೆ ಮೂಡಿಸಿದೆ.

Asian Games 2018,PV Sindhu Gets Asiad Silver, Loses Final To World No.1 Tai Tzu Ying

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ