ಏಷ್ಯನ್ ಗೇಮ್ಸ್: ಮಹಿಳೆಯರ ಟೆನ್ನಿಸ್ ನಲ್ಲಿ ಭಾರತದ ಅಂಕಿತಾಗೆ ಕಂಚು

ಪಾಲೆಂಬಂಗ್: ಏಷ್ಯನ್ ಗೇಮ್ಸ್ ಹದಿನೆಂತನೇ ಆವೃತ್ತಿಯ ಮಹಿಳಾ ಟೆನ್ನಿಸ್ ವಿಭಾಗದಲ್ಲಿ ಭಾರತದ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಕಂಚಿನ ಪದಕ ಗಳಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ಸ್ ವಿಭಾಗದಲ್ಲಿ ಚೀನಾದ ಶುಯಿ ಜಾಂಗ್ ಅವರಿಗೆ ಮಣಿದ ಅಂಕಿತಾ ಕಂಚಿಗೆ ತೃಪ್ತಿಪಡಬೇಕಾಯಿತು.
ಅಂಕಿತಾ 4-6, 6-7 (6) ಸೆಟ್ ಗಳಿಂದ ಪರಾಭವಗೊಂಡಿದ್ದಾರೆ.
ಗುಜರಾತ್ ನ ಅಹಮದಾಬಾದ್ ಮೂಲದವರಾದ ಅಂಕಿತಾ ಭಾರತದ ಪ್ರಸ್ತುತ ಮಹಿಳಾ ಸಿಂಗಲ್ಸ್‌ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಅಂಕಿತಾ  ಕ್ರೀಡಾಕೂಟದಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಯಾಗಿದ್ದಾರೆ. ಇದಕ್ಕೂ ಮುನ್ನ ಸಾನಿಯಾ ಮಿರ್ಜಾ ಅವರು 2006 ಮತ್ತು 2010 ರ ಕ್ರೀಡಾಕುಟದಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದ್ದರು.
ಇನ್ನು ಪುರುಷರ ವಿಭಾಗದಲ್ಲಿ ರೋಹನ್ ಬೋಪಣ್ಣ ಹಾಗು ದಿವಿಜ್ ಶವನ್ ಅವರುಗಳು ಟೆನ್ನಿಸ್ ಡಬಲ್ಸ್ ಫೈನಲ್ ಹಂತ ತಲುಪಿದ್ದು ಭಾರತಕ್ಕೆ ಚಿನ್ನ ಅಥವಾ ಬೆಳ್ಳಿಯ ಪದಕ ಖಾತ್ರಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ