ಏಷ್ಯನ್ ಗೇಮ್ಸ್: ಬಿಲ್ಗಾರಿಕೆಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ ಭಾರತದ ವನಿತೆಯರು

ಜಕಾರ್ತ : ಜಕಾರ್ತ್ ನಲ್ಲಿ ನಡೆಯುತ್ತಿರುವ 18ನೇ ಏಶ್ಯನ್‌ ಗೇಮ್ಸ್‌ನ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ಭಾರತೀಯ ವನಿತೆಯರ ಕಾಂಪೌಂಡ್‌ ತಂಡ ದಕ್ಷಿಣ ಕೊರಿಯದೆದುರು ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಮುಸ್ಕಾನ್‌ ಕಿರಾರ್‌, ಮಧುಮಿತಾ ಕುಮಾರಿ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರನ್ನು ಒಳಗೊಂಡ ಭಾರತೀಯ ಮಹಿಳಾ ತಂಡ ದಕ್ಷಿಣ ಕೊರಿಯದೆದುರು 228-331 ಅಂತರದಲ್ಲಿ ಪರಾಭವಗೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಮೊದಲ ಸೆಟ್‌ನಲ್ಲಿ 59-57ರಲ್ಲಿ ಮುಂದಿದ್ದ ಭಾರತೀಯ ಮಹಿಳೆಯರು ಎರಡನೇ ಸೆಟ್‌ನಲ್ಲಿ 58-56ರ ಅಂತರದಲ್ಲಿ ಪರಾಭವಗೊಂಡರು. ಮೂರನೇ ನಿರ್ಣಾಯಕ ಸೆಟ್‌ನಲ್ಲಿ ಉಭಯ ತಂಡಗಳ ನಡುವೆ 58 ಅಂಕಗಳ ಸಮಬಲ ಏರ್ಪಟ್ಟಿತು. ಆದರೆ ಅಂತಿಮವಾಗಿ ಭಾರತೀಯ ವನಿತೆಯರು 55-58ರ ಅಂತರದಲ್ಲಿ ಪರಾಭವಗೊಂಡರು.

ಭಾರತೀಯ ಪುರುಷ ಕಾಂಪೌಂಡ್‌ ಟೀಮ್‌ ಕೂಡ ಬಿಲ್ಗಾರಿಕೆಯ ಫೈನಲ್‌ ನಲ್ಲಿ ದಕ್ಷಿಣ ಕೊರಿಯವನ್ನು ಎದುರಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ