ನಾಲ್ಕು ವರ್ಷಗಳ ನಂತರ ಉಪೇಂದ್ರ ಅಭಿಯನದ ‘ಹೋಮ್ ಮಿನಿಸ್ಟರ್’ ಬಿರುಸಿನ ಚಿತ್ರೀಕರಣ

ಸುಜಯ್ ಕೆ ಶ್ರೀಹರಿ  ನಿರ್ದೇಶನದ ಉಪೇಂದ್ರ ಅಭಿಯನದ  ‘ಹೋಮ್ ಮಿನಿಸ್ಟರ್’  ಚಿತ್ರ  ಪ್ರಸ್ತುತ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದ್ದು, ಚಿತ್ರ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗಿದೆ.
ಹೋಮ್ ಮಿನಿಸ್ಟರ್ ಚಿತ್ರಕ್ಕಾಗಿ ನಾಲ್ಕು ವರ್ಷಗಳ ಹಿಂದೆಯೇ  ಉಪೇಂದ್ರ ಅವರನ್ನು ಕೇಳಿಕೊಳ್ಳಲಾಗಿತ್ತು. ಆದರೆ. ಸುಧೀರ್ಘ ವಿಳಂಬದ ನಂತರ  ಉಪೇಂದ್ರ ಮತ್ತೆ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ.
“ನನ್ನ ಮುಂಬರುವ ಚಲನಚಿತ್ರವನ್ನು ಒಂದು ವಾಕ್ಯದಲ್ಲಿ ವಿವರಿಸಬೇಕಾದರೆ ಅದು ಎರಡು ಅರ್ಥವನ್ನು ಹೊಂದಿದೆ. ಶೀರ್ಷಿಕೆಯು ಎರಡು ಅರ್ಥಗಳನ್ನೊಳಗೊಂಡಿದೆ. ಜನರು ರಾಜಕೀಯ ಚಿತ್ರವೆಂದು ಊಹಿಸಿಕೊಂಡು ಬಂದ್ದರೆ  ನಾನು ಅವುಗಳನ್ನು ಊಹೆ ಮಾಡಲಿದ್ದೇನೆ. ಆದರೆ ಹೋಮ್ ಮಿನಿಸ್ಟರ್  ರಾಜಕೀಯದಲ್ಲಿ ಬಳಸಲಾಗುವ ಒಂದು ಪದವಾಗಿರಬಹುದು ಮತ್ತು ಮನೆಯಲ್ಲಿ ಯಾರನ್ನಾದರೂ ವಿವರಿಸಲು ಆ ಪದ ಬಳಸಬಹುದು ಎಂದು ನಟ ಉಪೇಂದ್ರ  ಚಿತ್ರದ ಕಥೆ ಕುರಿತು ವಿವರಿಸಿದರು.ನಾಲ್ಕು ವರ್ಷಗಳ ಹಿಂದೆಯೇ ಹಲವು ಚಿತ್ರಗಳು ಕೈಯಲ್ಲಿದ್ದಾಗ ಈ ಚಿತ್ರಕ್ಕೆ ಅಪರ್ ಬಂದಿತ್ತು.  ಕಥೆ ಕೇಳಿ ತುಂಬಾ ಕುತೂಹಲವಾಗಿತ್ತು. ಬೇರೆಯವರಿಂದ ಚಿತ್ರ ಮಾಡಿಸುವಂತೆ ನಿರ್ಮಾಪಕರಿಗೆ ಹೇಳಿದ್ದೆ. ಆದರೆ . ಅವರು ನಾನೇ ಮಾಡಬೇಕೆಂದುಕೊಂಡಿದ್ದು, ವೈಯಕ್ತಿಕ ಕೆಲಸಗಳ ಕಾರಣ ಈ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ ಎಂದು ಹೇಳಿದರು.
ಈ ಚಿತ್ರಕ್ಕಾಗಿ ಇಬ್ಬರು ನಿರ್ದೇಶಕರು, ಶ್ರೀ ಹರಿ ಮತ್ತು ನಿರ್ಮಾಪಕರು, ಪೂರ್ಣ ನಾಯ್ಡು ಕಾದಿದ್ದಾರೆ. ಅವರ ತಾಳ್ಮೆಗೆ ಎಷ್ಟು ಹೇಳಿದ್ದರೂ ಸಾಲದು. ಮೊದಲ  ಕಾಪಿ ನೋಡಿದ ನಂತರ ವಿಶ್ವಾಸ ಬಂದಿದ್ದಾಗಿ ಉಪೇಂದ್ರ ಹೇಳಿದರು.
ಹೋಮ್ ಮಿನಿಸ್ಟರ್  ಚಿತ್ರದಲ್ಲಿ ಉಪೇಂದ್ರ ಟೆಕ್ಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುಂದರ ಹುಡುಗಿ ಸುತ್ತ ಚಿತ್ರ ಸಾಗುತ್ತದೆ . ಪೂರ್ಣ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಆದರೆ, ಎಲ್ಲಾ ಪಾತ್ರಗಳು ಪ್ರಸ್ತುತವಾಗಿವೆ ಎಂದು ಉಪೇಂದ್ರ ತಿಳಿಸಿದರು.  ವೇದಿಕಾ  ಮಹಿಳಾ ಪ್ರಧಾನ ಪಾತ್ರದಲ್ಲಿದ್ದು, ಮೊಹ್ಮಮದ್ ಘಿಬ್ರನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.ಇದೇ ವೇಳೆ ತಮ್ಮರಾಜಕೀಯ ಕುರಿತು ಮಾತನಾಡಿದ ಉಪೇಂದ್ರ ನಾನು ಜನರ ವ್ಯಕ್ತಿಯಾಗಿದ್ದಾನೆ. ಇದು ರಾಜ್ಯಕೀಯ ಅಲ್ಲ. ಇದು ಪ್ರಜಾಕಿಯವಾಗಿದ್ದು, ಜನರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುವುದಾಗಿ  ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ