ಕ್ಯಾನ್ಸರ್ ನಿಂದ ನರಳುತ್ತಿದ್ದ ಇಂಗ್ಲೀಷ್-ವಿಂಗ್ಲೀಷ್ ನಟಿ ಸುಜಾತಾ ಕುಮಾರ್ ನಿಧನ

ನವದೆಹಲಿ: ಪ್ರಸಿದ್ದ ಧಾರಾವಾಹಿ ನಟಿ ಹಾಗೂ ಇಂಗ್ಲೀಷ್-ವಿಂಗ್ಲೀಷ್ ಚಿತ್ರದಲ್ಲಿ ದಿವಂಗತ ನಟಿ ಶ್ರೀದೇವಿ ಸಹೋದರಿಯಾಗಿ ನಟಿಸಿದ್ದ ಸುಜಾತಾ ಕುಮಾರ್ ಇಹಲೋಕ ತ್ಯಜಿಸಿದ್ದಾರೆ.
ಸುಜಾತಾ ಮೆಟಾಸ್ಟಟಿಕ್ ಕ್ಯಾನ್ಸರ್  ನಿಂದ ಬಳಲುತ್ತಿದ್ದರು. ಸುಜಾತಾ ಸಹೋದರಿ ಸುಚಿತ್ರಾ ಕೃಷ್ಣಮೂರ್ತಿ ಫೇಸ್ಬುಕ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುಜಾತಾ ಕ್ಯಾನ್ಸರ್ ನ ನಾಲ್ಕನೇ ಹಂತದಲ್ಲಿದ್ದರು. ಕೆಲ ಅಂಗಗಳು ಕೆಲಸ ನಿಲ್ಲಿಸಿದ್ದವು. ಇಂಗ್ಲೀಷ್-ವಿಂಗ್ಲೀಷ್ ಚಿತ್ರ ಬಿಡುಗಡೆಗೂ ಮುನ್ನ 2012ರಲ್ಲಿ ಸುಜಾತಾ ಕ್ಯಾನ್ಸರ್ ನಿಂದ ಗುಣಮುಖನಾಗಿದ್ದೇನೆಂದು ಹೇಳಿದ್ದರು. ಇಂಗ್ಲೀಷ್ ವಿಂಗ್ಲೀಷ್ ಮೊದಲು ಕೆಲ ಚಿತ್ರಗಳಲ್ಲೂ ಸುಜಾತಾ ನಟಿಸಿದ್ದರು.
ಸುಜಾತಾ, ಕಿರುತೆರೆಯ ‘ಹೋಟೆಲ್ ಕಿಂಗ್ಸ್ಟನ್’ ಹಾಗೂ ‘ಬಾಂಬೆ ಟಾಕಿಂಗ್’ ರಿಯಾಲಿಟಿ ಶೋಗಳಲ್ಲಿ ನಟಿಸಿದ್ದರು. ಇಂಗ್ಲಿಷ್​ ವಿಂಗ್ಲಿಷ್​ ಚಿತ್ರ ಸೇರಿದಂತೆ ‘ರಂಜನಾ’, ‘ಸಲಾಮ್-ಇ-ಇಷ್ಕ್’ ಮತ್ತು ‘ಗೋರಿ ತೆರೆ ಪ್ಯಾರ್ ಮೇನ್’ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ