ಅಟಲ್ ಜಿ ಅವರ ಶಾಂತಿಯ ಕನಸು ನನಸು ಮಾಡುವ ಬಹುದೊಡ್ಡ ಜವಾಬ್ದಾರಿ ನಮ್ಮಮೇಲಿದೆ: ಇಮ್ರಾನ್ ಖಾನ್

ಇಸ್ಲಾಮಾಬಾದ್:ಆ-17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಇಸಿರುವ ಪಾಕಿಸ್ತಾನ ಭಾವಿ ಪ್ರಧಾನಿ ಇಮ್ರಾನ್ ಖಾನ್, ವಾಜಪೇಯಿ ಅವರ ಶಾಂತಿಯ ಕನಸನ್ನು ನನಸು ಮಾಡುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.

ವಾಜಪೇಯಿ ಭಾರತ ಮಾತ್ರವಲ್ಲ ದಕ್ಷಿಣ ಏಷ್ಯಾ ಖಂಡ ಓರ್ವ ಪ್ರಬುದ್ಧ ರಾಜಕಾರಣಿ ಮತ್ತು ನಾಯಕರಾಗಿದ್ದವರು. ಭಾರತ ಮತ್ತು ಪಾಕಿಸ್ತಾನ ನಡುವಿನ ಸೌಹಾರ್ಧ ಸಂಬಂಧ ಸುಧಾರಣೆಗಾಗಿ ಅವರು ಸಾಕಷ್ಟು ಶ್ರಮಿಸಿದ್ದರು. ಅವರ ಅಗಲಿಕೆ ನಿಜಕ್ಕೂ ನೋವು ತಂದಿದೆ. ಅವರ ಶ್ರಮ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸೌಹಾರ್ಧ ಸಂಬಂಧವನ್ನು ಗಟ್ಟಿಗೊಳಿಸಿ ಅವರ ಶಾಂತಿಯ ಕನಸನ್ನು ನನಸು ಮಾಡುತ್ತೇವೆ ಎಂದು ಹೇಳಿದ್ದಾರೆ.

ವಾಜಪೇಯಿ ಅವರು ತಾವು ವಿದೇಶಾಂಗ ಸಚಿರಾಗಿದ್ದಾಗಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಸುಧಾರಣೆಗಾಗಿ ಸಾಕಷ್ಟು ಒತ್ತು ನೀಡಿದ್ದರು. ಅದೇ ಕಾರ್ಯವನ್ನು ಅವರು ಪ್ರಧಾನಿಯಾದ ಮೇಲೂ ಮುಂದುವರೆಸಿದರು. ಅವರ ಸೇವೆ ಮತ್ತು ಶ್ರಮ ನಿಜಕ್ಕೂ ಗಮನಾರ್ಹವಾದದ್ದು. ಪ್ರಧಾನಿ ಕಚೇರಿಯ ಗೌರವವನ್ನು ಹೆಚ್ಚಿಸಿದರು. ವಾಜಪೇಯಿ ಅವರು ತಮ್ಮ ಕಾರ್ಯದಿಂದಲೇ ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ. ಅವರ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಾರತದ ಪ್ರಜೆಗಳಿಗೆ ದೇವರು ಕರುಣಿಸಲಿ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Atal Bihari Vajpayee,remembered for improving India-Pakistan ties,Imran Khan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ