ಲಂಡನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದು ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಲು ವಿಫಲರಾಗಿರುವುದೇ ಪಂದ್ಯದ ಸೋಲಿಗೆ ಕಾರಣ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯ ಸೋಲಿನ ಬಳಿಕ ಮಾತನಾಡಿದ ಕೊಹ್ಲಿ ಎರಡೂ ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಪಂದ್ಯ ಕೈಚೆಲ್ಲಬೇಕಾಯಿತು. ಕಳೆದ ಐದು ಟೆಸ್ಟ್ ಪಂದ್ಯಗಳಲ್ಲಿ ಮೊದಲ ಬಾರಿಗೆ ನಾವು ತೀರಾ ಕಳಪೆ ಪ್ರದರ್ಶನ ನೀಡಿದ್ದೆವೇ. ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ಗೆ ಎಲ್ಲ ಶ್ರೇಯ ಸಲ್ಲಬೇಕು ಎಂದರು.
ಇಲ್ಲಿನ ಪರಿಸ್ಥಿತಿಯು ತಮಗೆ ಲಾಭಕರವಾಗಿರಲಿಲ್ಲ ಎಂಬ ಬಗ್ಗೆ ಹೇಳಲಾಗದು. ಪರಿಸ್ಥಿತಿಗೆ ತಕ್ಕಂತೆ ಆಟವಾಡುವ ಮೂಲಕ ಯಶಸ್ಸು ಸಾಧಿಸಲು ಯತ್ನಿಸಬೇಕು. ಇಂಗ್ಲೆಂಡ್ ಬೌಲರ್ ಗಳು ಅತ್ಯುತ್ತಮ ದಾಳಿ ನಡೆಸಿದರು ಎಂದು ಹೇಳಿದರು.
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 159 ರನ್ ಗಳಿಂದ ಸೋಲನುಭವಿಸಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-0ಯಿಂದ ಗೆಲುವು ಸಾಧಿಸಿದೆ.