ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ವೈಫಲ್ಯ: ಶಾಸ್ತ್ರಿ, ಕೊಹ್ಲಿ ಅವರ ಸ್ಪಷ್ಟನೆ ಕೇಳಲಿರುವ ಬಿಸಿಸಿಐ

ನವದೆಹಲಿ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಭಾರತ -ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಾವಳಿಯಲ್ಲಿ ಬಾರತ ಸತತ ಎರಡು ಪಂದ್ಯಗಳನ್ನು ಸೋತ ಬೆನ್ನಲ್ಲಿಯೇ ಮುಖ್ಯ ತರಬೇತುದಾರ ರವಿ ಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ  ಅವರುಗಳನ್ನು ಬಿಸಿಸಿಐ ಪ್ರಶ್ನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಟಿಂಗ್ ಹ್ಯಾಂ ನಲ್ಲಿ ಶನಿವಾರದಂದು ಮೂರನೇ ಪಂದ್ಯ ಪ್ರಾರಂಬಗೊಂಡ ಬಳಿಕ ನಾಲ್ಕು, ಐದನೇ ಟೆಸ್ಟ್ ಗಳಿಗಾಗಿ ಆಟಗಾರರ ಆಯ್ಜೆ ನಡೆಯಲಿದೆ. ಇದಕ್ಕೆ ಮುನ್ನ ಬಿಸಿಸಿಐ ರವಿಶಾಸ್ತ್ರಿ ಹಾಗೂ ಕೊಹ್ಲಿ  ಅವರಿಗೆ  0-2 ಅಂತರದ ಸೋಲಿನ ಕುರಿತು ಪ್ರಶ್ನಿಸಲು ತೀರ್ಮಾನಿಸಿದೆ.
” ದಕ್ಷಿಣ ಆಫ್ರಿಕಾದ ಸರಣಿಯನ್ನು ಸೋತಾಗ ಕೊಹ್ಲಿ ಆಟಗಾರರ ಬಿಡುವಿಲ್ಲದ ವೇಳಾಪಟ್ಟಿ, ಅಭ್ಯಾಸದ ಕೊರತೆಯೇ ಕಾರಣ ಎಂದಿದ್ದರು.ಆದರೆ ಈ ಬಾರಿ ಅವರು ಸಾಕಷ್ಟು ಸಮಯ ದೊರಕಿಲ್ಲ ಎನ್ನುವ ಹಾಗಿಲ್ಲ. ಟೆಸ್ಟ್ ಪಂದ್ಯದ ಮುನ್ನ ವೈಟ್ ಬಾಲ್ ಪಂದ್ಯಗಳನ್ನು ಆಯೋಜಿಸಲು ನಾವು ನಿರ್ಧರಿಸಿದ್ದೆವು. ” ಹೆಸರು ಬಹಿರಂಗಪಡಿಸದ ಬಿಸಿಸಿಐ ಹಿರಿಯ ಅಧಿಕಾರಿಯ್ತೊಬ್ಬರು ಪಿಟಿಐ ಗೆ ಹೇಳಿದ್ದಾರೆ.
“ನಾವು ಮೊದಲಿಗೆ ವೈಟ್ ಬಾಲ್ ಪ್ಂದ್ಯಗಳನ್ನು ಆಯೋಜಿಸಿದ್ದೇವೆ. ಷಾಡೋ ಟೂರ್’ ಎಂಬ ಪರಿಕಲ್ಪನೆಯನ್ನು ಪ್ರಾರಂಭಿಸುವ ಸಮಯದಲ್ಲಿ ನಾವು ಭಾರತ ಎ ತಂಡವನ್ನು  ಹಿರಿಯರ ತಂಡದ ಒತ್ತಾಯದ ಮೇರೆಗೆ ನಾವು ಕಳಿಸಿದ್ದೇವೆ. ಮುರಳಿ ವಿಜಯ್ ಹಾಗೂ ಅಜಿಂಕ್ಯ ರೆಹಾನೆ ಈ ’ಎ’ ತಂಡವನ್ನು ಮುನ್ನಡೆಸಿದ್ದಾರೆ. ಹೀಗೆ ಅವರಿಗೆ ಸಾಕಷ್ಟು ಸಮಯಾವಕಾಶವನ್ನು ನೀಡಿದ್ದಾಗಲೂ ಉತ್ತಮ ಫಲಿತಾಂಶ ಬರದೆ ಹೋದಲ್ಲಿ ಪ್ರಶ್ನಿಸುವ ಹಕ್ಕು ಮಂಡಳಿಗಿದೆ.” ಅವರು ಹೇಳಿದ್ದಾರೆ.
ಒಂದು ವೇಳೆ ಭಾರತ ಈ ಸರಣಿಯನ್ನೂ ಕಳೆದುಕೊಂಡಲ್ಲಿ ಶಾಸ್ತ್ರಿ-ಕೊಹ್ಲಿ ಇಬ್ಬರೂ ತಮ್ಮ ಅಧಿಕಾರ ಪದದಲ್ಲಿ ಮುಂದುವರಿಯುವುದು ಅಸಂಬವ ಎನ್ನಲಾಗುತ್ತಿದೆ. “ಶಾಸ್ತ್ರಿ ಮತ್ತು ಬೆಂಬಲಿತ ಸಿಬ್ಬಂದಿಯ ತಂಡವು ಇದಾಗಲೇ ಆಸ್ಟ್ರೇಲಿಯಾ ( (2014-15ರಲ್ಲಿ 0-2) ದಕ್ಷಿಣ ಆಫ್ರಿಕಾ ((1-2 ಅಂತರದ ಸೋಲು 2017-18). ನಲ್ಲಿ ಪ್ರಮುಖ ಟೆಸ್ಟ್ ಸರಣಿಯನ್ನು ಕೈಚೆಲ್ಲಿದೆ. ಇದೀಗ ಇಂಗ್ಲೆಂಡ್ ನಲ್ಲಿ ಸಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇನ್ನು ನೀವು ಹಿಂದಿನದನ್ನು ನೆನೆದರೆ ಬಿಸಿಸಿಐ ಡಂಕನ್ ಫ್ಲೆಚರ್ ಅವರ ಸಹಾಯಕ ಜೋ ದಾವೆಸ್ (ಬೌಲಿಂಗ್ ತರಬೇತುದಾರ) ಮತ್ತು ಟ್ರೆವರ್ ಪೆನ್ನಿ (ಫೀಲ್ಡಿಂಗ್ ತರಬೇತುದಾರ)  ಅವರನ್ನು ಭಾರತವು ಇಂಗ್ಲೆಂಡ್ ನಲ್ಲಿ 1-3 ಅಂತರದಲ್ಲಿ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಅಧಿಕಾರದಿಂದ ವಜಾಗೊಳಿಸಿತ್ತು.
ಬ್ಯಾಟಿಂಗ್ ತರಬೇತುದಾರ ಸಂಜಯ್ ಬಂಗಾರ್ ಹಾಗೂ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಅವರ ಸಾಧನೆ ಕೂಡಾ ಮೌಲ್ಯಮಾಪನಗೊಳ್ಳುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಶ್ರೀಧರ್ ಜವಾಬ್ದಾರಿ  ವಹಿಸಿಕೊಂಡ ನಂತರ, ಭಾರತೀಯಸ್ಲಿಪ್ ಫೀಲ್ಡರ್ಸ್ 50 ಕ್ಯಾಚ್ ಗಳನ್ನು ಕೈಬಿತ್ತಿದ್ದಾರೆ.ಆಸ್ಟ್ರೇಲಿಯದ ಮಾಜಿ ನಾಯಕ ಇಯಾನ್ ಚಾಪೆಲ್ ಸಹ ಈ ತಂತ್ರಗಾರಿಕೆಯನ್ನು ಕುರಿತು ಪ್ರಶ್ನಿಸಿದ್ದಾರೆ. ಇನ್ನು ಬಂಗಾರ್ ವಿಚಾರಕ್ಕೆ ಬಂದರೆ ಠಿಣ ಪ್ರವಾಸಗಳಿಗೆ ಆಟಗಾರರನ್ನು ಸಿದ್ಧಪಡಿಸುವುದು ಅವರ ದೊಡ್ಡ ಸವಾಲು ನಾಲ್ಕು ವರ್ಷಗಳ ನಂತರ, ಸಹ  ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಒದಗಿಸಲು ಅವರಿಗೆ ಸಾಧ್ಯವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಲೆಜೆಂಡರಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ರಾಷ್ಟ್ರೀಯ ತಂಡದ ಮೂವರು ಆಯ್ಕೆದಾರರಲ್ಲಿ ಕನಿಷ್ಟ ಒಬ್ಬರು ಪ್ರವಾಸದ ವೇಳೆ ತಂಡದ ನಿರ್ವಹಣೆ ನಡೆಸುವವರ ಜತೆಯಾಗಿರಬೇಕು ಎಂದು ಸಲಹೆ ನೀಡುತ್ತಾರೆ.
ಆಗಸ್ಟ್ 18 ರಂದು ಪ್ರಾರಂಭವಾಗುವ ವ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಗೆ ಕೊಹ್ಲಿ ಅವರು ಸೂಕ್ತ ಸಮಯ ಹೊಂದಿಲ್ಲವಾದರೆ ಅವರ ಬದಲಿಗೆ ಸೂಕ್ತ ಆಯ್ಕೆ ಮಾಡುವುದು ಅನಿವಾರ್ಯವಾಗಲಿದೆ. ಇಂತಹಾ ಸಮಯದಲ್ಲಿ ಸಾಮಾನ್ಯವಾಗಿ ಅನುಸರಿಸುವಂತೆ ಉಪನಾಯಕನೇ ತಂಡವನ್ನು ಮುನ್ನಡೆಸಬೇಕು. ಆದರೆ ಜಿಂಕ್ಯ ರಹಾನೆ ಸಹ ಉತ್ತಮ ಫಾರ್ಮನಲ್ಲಿ ಇಲ್ಲದೆ ಇದ್ದ ಕಾರಣ ಹಿರಿಯ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ನಾಯಕತ್ವ ವಹಿಸುವ ಸಾಧ್ಯತೆ ಗೋಚರಿಸುತ್ತಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ