ಐತಿಹಾಸಿಕ 250 ಅಡಿ ಉದ್ದದ ಹುಸೈನಿವಾಲ ಸೇತುವೆ ಲೋಕಾರ್ಪಣೆ

ಹುಸೈನಿವಾಲಾ: ಆ-12: ಪಂಜಾಬ್‌ನ ಗಡಿಯಲ್ಲಿರುವ ಐತಿಹಾಸಿಕ 250 ಅಡಿ ಉದ್ದದ ಹುಸೈನಿವಾಲ ಸೇತುವೆಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇಶಕ್ಕೆ ಲೋಕಾರ್ಪಣೆ ಮಾಡಿದ್ದಾರೆ.

ಎಡಿಜಿಪಿಯ ವಾಹನದಲ್ಲಿ ಹುಸೈನಿವಾಲ ಸೇತುವೆ ಮೇಲೆ ಸಂಚಾರ ನಡೆಸುವ ಮೂಲಕ ಉದ್ಘಾಟನೆ ಮಾಡಿದ ಸೀತಾರಾಮನ್‌, ಸೇತುವೆ ನಿರ್ಮಾಣ ಕಾರ್ಯವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿರುವ ಗಡಿ ರಸ್ತೆಗಳ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸೇತುವೆಯು ಸೇನೆಯ ವಾಹನಗಳ ಸಂಚಾರ, ಯುದ್ಧ ಸಾಮಗ್ರಿ ಇತರ ವ್ಯವಸ್ಥೆಗಳನ್ನು ಉತ್ತಮವಾಗಿ ಪೂರೈಸಲು ನೆರವಾಗಲಿದೆ.

ಈ ಸೇತುವೆ 1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಯುದ್ಧದ ಸಮಯದಲ್ಲಿ ನಾಶವಾಗಿತ್ತು. ಈ ಹುಸೈನಿವಾಲ ಸೇತುವೆಯು ಫಿರೋಜ್‌ಪುರವನ್ನು ಫಿರೋಜ್‌ಪುರ–ಲಾಹೋರ್‌ ಹೆದ್ದಾರಿಯಲ್ಲಿ ಸಂಪರ್ಕಿಸುತ್ತದೆ.

ಬಳಿಕ ಸೀತಾರಾಮನ್‌ ಅವರು, ಅಂತರರಾಷ್ಟ್ರೀಯ ಗಡಿಗೆ ಲೆಫ್ಟಿನೆಂಟ್‌ ಜನರಲ್‌ ಸುರೀಂದರ್‌ ಸಿಂಗ್‌, ಸೇನೆಯ ಸಿಡಿಆರ್‌, ಪಶ್ಚಿಮ ವಲಯದ ಕಮಾಂಡರ್‌ ಜತೆಗೂಡಿ, ಸೇನೆಯ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದರು. ಎಡಿಜಿಪಿ ಸಿಬ್ಬಂದಿ ಜತೆ ಅವರು ಮುಕ್ತ ಸಂವಾದ ನಡೆಸಿದರು.

Defence Minister Nirmala Sitharaman, inaugurates, historic Hussainiwala bridge

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ