
ಸ್ವಿಟ್ಜರ್ಲ್ಯಾಂಡ್ ಸರ್ಕಾರ 10 ದಿನಗಳಲ್ಲಿ ಹೆಚ್ ಎಸ್ ಬಿಸಿ ಖಾತೆಗಳ ವಿವರ ಹಂಚಿಕೊಳ್ಳಲಿದೆ ಎಂದು ವಿತ್ತ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಸಿಟ್ಜರ್ಲ್ಯಾಂಡ್ ನಲ್ಲಿರುವ ಸುಪ್ರೀಂ ಕೋರ್ಟ್ ಮಾಹಿತಿ, ಹೆಚ್ ಎಸ್ ಬಿಸಿ ಖಾತೆಗಳ ವಿವರವನ್ನು ಹಂಚಿಕೊಳ್ಳುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಭಾರತದೊಂದಿಗೆ ಮಾಹಿತಿ ಹಂಚಿಕೊಳ್ಳುವುದಕ್ಕೆ ಸಿದ್ಧವಿದೆ ಎಂದು ಪೀಯೂಷ್ ಗೋಯಲ್ ಹೇಳ್ದಿದಾರೆ.
2010-11 ಹಾಗೂ 2011-12 ರಿಂದ 2014 ರಲ್ಲಿ ಹೆಚ್ ಎಸ್ ಬಿಸಿ ಪಟ್ಟಿ ಬಿಡುಗಡೆಯಾಗಿತ್ತು, ಭಾರತ ಸರ್ಕಾರ ಖಾತೆಗಳ ವಿವರಗಳನ್ನು ಪಡೆಯಲು ಯತ್ನಿಸುತ್ತಿತ್ತಾದರೂ, ಸ್ವಿಸ್ ಸರ್ಕಾರ ಅದಕ್ಕೆ ಅಡ್ಡಿ ಉಂಟು ಮಾಡುತ್ತಿತ್ತು ಆದರೆ ಈಗ ಸ್ವಿಸ್ ಸುಪ್ರೀಂ ಕೋರ್ಟ್ ಖಾತೆಗಳ ವಿವರ ಹಂಚಿಕೊಳ್ಳುವುದಕ್ಕೆ ಅನುಮತಿ ನೀಡಿದ್ದು 10 ದಿನಗಳಲ್ಲಿ ಹೆಚ್ ಎಸ್ ಬಿಸಿಯ ಖಾತೆಯ ಗೌಪ್ಯ ವಿವರಗಳು ಭಾರತ ಸರ್ಕಾರದ ಕೈ ಸೇರಲಿವೆ ಎಂದು ಸಚಿವರು ರಾಜ್ಯಸಭೆಗೆ ತಿಳಿಸಿದ್ದಾರೆ.