ಬೆಂಗಳೂರು: ಗುರುದತ್ತ ಗಣಿಗ ನಿರ್ದೇಶನದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದ್ದು, ಚಿತ್ರ ನಿರ್ಮಾಪಕರು ಮೆಗಾ ಆಡಿಯೋ ಬಿಡುಗಡೆಗೆ ಸಿದ್ಧತೆ ನಡೆಸಿದೆ.
ಆಗಸ್ಟ್ 10 ರಂದು ಆಡಿಯೋ ಬಿಡುಗಡೆ ಸಮಾರಂಭ ಏರ್ಪಡಿಸಿದ್ದು, ಯಾರ್ಯಾರನ್ನ ಕರೆತರಬೇಕೆಂಬ ಬಗ್ಗೆ ಯೋಜನೆ ರೂಪಿಸುತ್ತಿದೆ. ಈ ಕಾರ್ಯಕ್ರವನ್ನು ಸ್ಮರಣೀಯವಾಗಿಸಲು ಪ್ರೊಡಕ್ಷನ್ ಹೌಸ್ ನಿರ್ಧರಿಸಿದೆ. ದಕ್ಷಿಣ ಭಾರತದ ಪ್ರಸಿದ್ಧ ತಾರೆಗಳನ್ನು ಕರೆ ತರಲು ಯತ್ನಿಸುತ್ತಿದೆ.
ರೆಬೆಲ್ ಸ್ಟಾರ್ ಅಂಬರೀಷ್ ಅವರ ಗುಣ ಸ್ವಭಾವದ ಬಗ್ಗೆ ಚಿತ್ರಿಸಿರುವ ವಿಡಿಯೋ ಸಾಂಗ್ ಬಿಡುಗಡೆಗೆ ಪ್ಲಾನ್ ಮಾಡುತ್ತಿದೆ, ರೆಬೆಲ್ ಸ್ಟಾರ್ ಅಂಬರೀಷ್ ನಟಿಸಿರುವ ಎಲ್ಲಾ ಸಿನಿಮಾಗಳನ್ನು ಗಮನದಲ್ಲಿರಿಸಿಕೊಡು ಹಾಡಿನ ಸಾಹಿತ್ಯ ಬರೆಯಲಾಗಿದೆ. ಕಿಚ್ಚ ಕ್ರಿಯೇಷನ್ ಸಿನಿಮಾ ನಿರ್ಮಿಸುತ್ತಿದ್ದು ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.