ರಾಜ್ಯಾದ್ಯಂತ ಮಳೆ ಹಿನ್ನೆಲೆ: ಅಂಬಿ ನಿಂಗ್ ವಯಸ್ಸಾಯ್ತೋ ಬಿಡುಗಡೆ ವಿಳಂಬ

ಬೆಂಗಳೂರು: ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಬಿಡುಗಡೆ ವಿಳಂಬವಾಗಿದೆ,
ಆಗಸ್ಟ್ ತಿಂಗಳ ಅಂತ್ಯದಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಮೆಗಾ ಆಡಿಯೋ ರಿಲೀಸ್ ಗೂ ಸಿದ್ಧತೆ ನಡೆಸಲಾಗಿತ್ತು. ಹೀಗಾಗಿ ಎಲ್ಲಾ ಪ್ಲಾನ್ ಗಳನ್ನು ಸದ್ಯ ತಡೆಹಿಡಿಯಲಾಗಿದೆ,
ಕೊಡಗು, ಶಿವಮೊಗ್ಗ, ಮಂಗಳೂರು ಮತ್ತು ಕರ್ನಾಟಕದ ಹಲವೆಡೆ ಮಳೆಯಾಗುತ್ತಿರುವ ಕಾರಣ ಸಿನಿಮಾ ರಿಲೀಸ್ ಮುಂದೂಡಿದ್ದೇವೆ, ಎಂದು ಸಿನಿಮಾ ನಿರ್ದೇಶಕ ಜಾಕ್ ಮಂಜು ಹೇಳಿದ್ದಾರೆ.
ರಾಜ್ಯದ ಪ್ರತಿಯೊಬ್ಬರ ಸಿನಿಮಾ ನೋಡಬೇಕು ಎಂಬುದು ನಮ್ಮ ಉದ್ದೇಶ, ಹೀಗಾಗಿ ಸಿನಿಮಾ ಬಿಡುಗಡೆ ತಡೆ ಹಿಡಿಯಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಗುರುದತ್ತ ಗಾಣಿಗ ಅವರ ನಿರ್ದೇಶನದ ಮೊದಲನೇ ಸಿನಿಮಾವಾಗಿದೆ, ದಸರಾ ಹಬ್ಬದೊಳಗೆ ರಿಲೀಸ್ ಮಾಡುವ ಸಾಧ್ಯತೆಯಿದೆ.ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಗಿದಿದ್ದು,ಸೆಪ್ಟಂಬರ್ ಅಂತ್ಯ ಅಥವಾ ಅಕ್ಟೋಬರ್ ತಿಂಗಳ ದಸರಾದಲ್ಲಿ ಸಿನಿಮಾ ರಿಲೀಸ್ ಮಾಡಲಾಗುವುದು ಎಂದು ನಿರ್ದೇಶಕ ಗುರುದತ್ತ ಗಾಣಿಗ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ