ದುಬೈ: ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 1ರಿಂದ ಆರಂಭಗೊಳ್ಳುತ್ತಿದ್ದು ಟೆಸ್ಟ್ ನ ನಂಬರ್ 1 ಬ್ಯಾಟ್ಸ್ ಮನ್ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ರನ್ನು ಹಿಂದಿಕ್ಕಿ ತಾವು ನಂಬರ್ 1 ಆಗಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದು ಸುವರ್ಣವಕಾಶ.
ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಸ್ಟೀವನ್ ಸ್ಮಿತ್ ಒಂದು ವರ್ಷ ನಿಷೇಧಕ್ಕೊಳಗಾಗಿದ್ದಾರೆ. 929 ಅಂಕಗಳೊಂದಿಗೆ ಸ್ಮೀವನ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದು 903 ಅಂಕಗಳೊಂದಿಗೆ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸ್ಮಿತ್ ಗೂ ಕೊಹ್ಲಿಗೂ 26 ಅಂಕಗಳ ಅಂತರವಿದ್ದು ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರೆ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ನಂಬರ್ 1 ಸ್ಥಾನಕ್ಕೇರುವ ಸಾಧ್ಯತೆ ಇದೆ.
ಇನ್ನು ಇಂಗ್ಲೆಂಡ್ ಮತ್ತು ಟೀಂ ಇಂಡಿಯಾದ ತಲಾ ಐವರು ಆಟಗಾರರು ಟಾಪ್ 50ರಲ್ಲಿ ಸ್ಥಾನಪಡೆದಿದ್ದಾರೆ. ಚೇತೇಶ್ವರ ಪೂಜಾರ 6, ಕೆಎಲ್ ರಾಹುಲ್ 18, ಅಜಿಂಕ್ಯ ರಹಾನೆ 19, ಮುರಳಿ ವಿಜಯ್ 23 ಮತ್ತು ಶಿಖರ್ ಧವನ್ 24ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ತಂಡದ ಜೋ ರೂಟ್ 3, ಅಲಿಸ್ಟಿರ್ ಕುಕ್ 13, ಜಾನಿ ಬ್ರೈಸ್ಟೋವ್ 16, ಬೆನ್ ಸ್ಟೋಕ್ಸ್ 28 ಮತ್ತು ಮೋಹಿನ್ ಅಲಿ 43ನೇ ಸ್ಥಾನದಲ್ಲಿದ್ದಾರೆ.